More

    ಶಾಲೇಲಿ ಕ್ವಾಲಿಟಿ ಜತೆ ಹಾಜರಾತಿಯೂ ಕಡಿಮೆ!

    ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಇಒ ಸುರೇಂದ್ರ ಕಾಂಬಳೆ ಹಾಗೂ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಶಾಲೆಯಲ್ಲಿನ ವ್ಯವಸ್ಥೆ ಪರಿಶೀಲಿಸಿ ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.

    ಅಧಿಕಾರಿಗಳು ವಿವಿಧ ತರಗತಿ ಪರಿಶೀಲಿಸಿದ ವೇಳೆ ದಾಖಲಾತಿಗಿಂತ ಕಡಿಮೆ ಹಾಜರಾತಿ ಇದ್ದದ್ದು ಕಂಡುಬಂದಿತು. ಪರಿಣಾಮಕಾರಿ ಬೋಧನೆಗೆ ಕೈಗೊಂಡ ಕ್ರಮಗಳ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು. ಹಾಜರಾತಿ ಹೆಚ್ಚಳ ಹಾಗೂ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಸಂಬಂಧ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಸಲಹೆ ನೀಡಿದರು.

    ಶಾಲೆ ಹಿಂಭಾಗದ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿರುವುದರಿಂದ ಸ್ವಚ್ಛಗೊಳಿಸಲು ಆಸ್ಪದ ನೀಡುತ್ತಿಲ್ಲ ಎಂದು ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು. ಆವರಣದಲ್ಲಿರುವ ಶಿಥಿಲ ಕೊಠಡಿಗಳ ತೆರವಿಗೆ ಅನುಮತಿ ಪಡೆಯಲಾಗಿದೆ. ತೆರವುಗೊಳಿಸಿ ಆ ಜಾಗದಲ್ಲಿ ಶೌಚಗೃಹ ನಿರ್ಮಿಸುವಂತೆ ಬಿಇಒ ಸುರೇಂದ್ರ ಕಾಂಬ್ಳೆ ಎಸ್ಡಿಎಂಸಿ ಸದಸ್ಯರು ಹಾಗೂ ಮುಖ್ಯಶಿಕ್ಷಕಿ ಶಹನಾಜ್ ಬೇಗಂಗೆ ಸೂಚಿಸಿದರು.

    ಬಿಆರ್‌ಸಿ ಸಮನ್ವಯಾಧಿಕಾರಿ ಜಗದೀಶಪ್ಪ, ಬಿಆರ್‌ಪಿ ಲೋಕೇಶ ಗೋಟೂರು ಇತರರು ಇದ್ದರು. ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ‘ಶಾಲೆಯಲ್ಲಿ ಕ್ವಾಂಟಿಟಿ ಇದೆ, ಕ್ವಾಲಿಟಿ ಇಲ್ಲ’ ಶೀರ್ಷಿಕೆ ಅಡಿ ಡಿ.4ರಂದು ವಿಜಯವಾಣಿಯಲ್ಲಿ ವಿಸ್ತತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts