ಮಡಿಕೇರಿ : ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾದುದು. ವಿದ್ಯಾವಂತರು ಈ ದೇಶದ ಆಸ್ತಿ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.


ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಸಂಜೆ ನಡೆದ ಕುವೆಂಪು ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ವಿದ್ಯೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಕ್ಕಲಿಗರ ಕೊಡುಗೆ ಅಪಾರ. ಒಂದು ವಿದ್ಯಾಸಂಸ್ಥೆ ಬೆಳೆಯಬೇಕಾದರೆ ಪಾಲಕರ ಪ್ರೋತ್ಸಾಹ ಮುಖ್ಯ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವಿದ್ಯಾ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಕಲಿಯುವ ಮಕ್ಕಳಿಗೆ ಶಾಲೆಯಲ್ಲಿ ಎಲ್ಲ ಸೌಕರ್ಯ ಸಿಗಬೇಕು. ಸಂಘದ ಕೆಲ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.


ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಶೇ.98 ರಷ್ಟು ಗ್ರಾಮೀಣ ಮಕ್ಕಳು ಕುವೆಂಪು ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು ನಮ್ಮ ಹೆಮ್ಮೆ. ಕಳೆದ ಆರು ವರ್ಷಗಳಿಂದಲೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಪ್ರಸಕ್ತ ವರ್ಷದಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸಲಾಗಿದೆ ಎಂದು ಹೇಳಿದರು.


2023-24ನೇ ಸಾಲಿನ ಉತ್ತಮ ವಿದ್ಯಾರ್ಥಿಯಾಗಿ 6ನೇ ತರಗತಿ ರಿಧಾನ್, ಎಸ್‌ಎಸ್‌ಎಲ್‌ಸಿ ಟಾಪರ್ ಆಗಿ ವೈ.ಎಸ್.ಧನ್ಯಾ ಹಾಗೂ ದ್ವಿತೀಯ ಪಿಯುಸಿ ಪ್ರನುತಾ ಟಾಪರ್ ಗೌರವಕ್ಕೆ ಭಾಜನರಾದರು. 1ನೇ ತರಗತಿಯಿಂದ 9ನೇ ತರಗತಿವರೆಗೆ ಹೆಚ್ಚು ಅಂಕಪಡೆದ ಅದಿರ್ಥಿಗೌಡ ಮತ್ತು ಪೂರ್ವಿಕಾ, ನವಾಮಿಕಾ, ಸಮೃತ ವಿಠಲ್, ಇಶಾನಿ, ವನಿಶಾ, ಕೋಮಲ್, ಸಂಯಮ ವಿಠಲ್, ದೀಕ್ಷಿತಾ ನಾರಾಯಣ, ಚರಿತಾ, ಸಿರಿ, ಧನ್ಯತಾ, ಆದ್ವಿ, ಎಚ್.ಆರ್.ಜೀವಿತಾ ಅವರನ್ನು ಸನ್ಮಾನಿಸಲಾಯಿತು.


ರಾಷ್ಟ್ರೀಯ ಮಟ್ಟದ ಕರಾಟೆ ಪಟು ಮಾನಸಾ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪ್ರತೀಕ್ಷಾ, ಷಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಧನ್ಯಾ ಮತ್ತು ಪುಷ್ಪಾಂಜಲಿ, ಚಿತ್ರ ಕಲೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದ ಸಧನ್, 500ಮೀ ಓಟದಲ್ಲಿ ರಾಜ್ಯಮಟ್ಟದ ಸ್ಪರ್ಧಿ ರಕ್ಷಿತ್, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದ ಬಾಲಕಿಯರ ವಾಲಿಬಾಲ್ ತಂಡದ ಬಿಂದು, ಜೀವಿತಾ, ವಿದ್ಯಾಗೌರಿ, ರಿಷಿಕಾ, ಹನಿ, ಕೃತಿ, ವರ್ಣಿಕಾ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್.ರವೀಂದ್ರ, ಬಿಇಒ ಭಾಗ್ಯಮ್ಮ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎನ್.ಬಿ.ಗಣಪತಿ, ಖಜಾಂಚಿ ಜಿ.ಪಿ.ಲಿಂಗರಾಜು, ಶಾಲಾ ವ್ಯವಸ್ಥಾಪಕ ಕೆ.ಎಂ.ಜಗದೀಶ್, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಮುಖ್ಯ ಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೆಸ್, ಸಂಘದ ಪದಾಧಿಕಾರಿಗಳು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Share This Article

Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್‌ ಗ್ಯಾರೆಂಟಿ

ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…

Salt Benefits | ಒಂದು ತಿಂಗಳು ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ತೂಕ ನಷ್ಟ ಪಕ್ಕಾ! ಅಪಾಯವೂ ಖಂಡಿತ

ಬೆಂಗಳೂರು:  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಗಮನ…

Palmistry: ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದ್ರೆ ನಿಮ್ಮಂಥ ಅದೃಷ್ಟವಂತರು ಯಾರೂ ಇಲ್ಲ! ಹಣ ನಿಮ್ಮನ್ನು ಹುಡುಕಿ ಬರುತ್ತೆ

ಅನೇಕ ಜನರು ತಮ್ಮ ಭವಿಷ್ಯ (prediction)ವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ