More

    ಕಾಂಗ್ರೆಸ್ ಶಾಸಕನ ಮೇಲೆ ಇಡಿ ದಾಳಿ; ಐಷಾರಾಮಿ ಕಾರು, ಆಭರಣಗಳು ಮತ್ತು ನಗದು ವಶ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿರುವ ಆರೋಪದಡಿ ಕಾಂಗ್ರೆಸ್‌ನ ಹರಿಯಾಣ ಶಾಸಕ ಧರಂ ಸಿಂಗ್ ಚೋಕ್ಕರ್ ನಿವಾಸ ಮತ್ತು ಅವರ ಒಡೆತನದ ಸಂಸ್ಥೆಗಳ ಮೇಲೆ ಇಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

    ಇದನ್ನೂ ಓದಿ: ಕಲಬುರಗಿ ವಿಭಾಗದ ಜಿಲ್ಲಾಧಿಕಾರಿಗಳ ಸಭೆ : ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ

    ದಾಳಿಯಲ್ಲಿ ನಾಲ್ಕು ಐಷಾರಾಮಿ ಕಾರುಗಳು, 14.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 4.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಇಲಾಖೆ ಮಾಹಿತಿ ನೀಡಿದೆ. ಸಾಯಿ ಐನಾ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ (ಪ್ರಸ್ತುತ ಮಹಿರಾ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್) ಸೇರಿದ ಸಮಲ್ಖಾ, ಗುರುಗ್ರಾಮ್ ಮತ್ತು ದೆಹಲಿಯ ಹನ್ನೊಂದು ಸ್ಥಳಗಳು ಮತ್ತು ಚೋಕರ್ ಮಾಲೀಕತ್ವದ ಮಹಿರಾ ಗ್ರೂಪ್‌ನ ಇತರ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.

    “ಶಾಸಕ ಚೋಕ್ಕರ್ ಸೇರಿದಂತೆ ಅವರ ಪುತ್ರರಾದ ಸಿಕಂದರ್ ಸಿಂಗ್ ಮತ್ತು ವಿಕಾಸ್ ಚೋಕರ್ ಮತ್ತು ಇತರ ಪ್ರಮುಖ ಉದ್ಯೋಗಿಗಳು ನಾವು ನಡೆಸಿದ ದಾಳಿಯ ವೇಳೆ ಸಿಕ್ಕಿಲ್ಲ. ಇಲ್ಲಿಯವರೆಗೆ ತನಿಖೆಗೆ ಹಾಜರಾಗಿಲ್ಲ” ಎಂದು ಸಂಸ್ಥೆ ಆರೋಪಿಸಿದೆ,(ಏಜೆನ್ಸೀಸ್).

    ಶಾರೂಖ್ ಖಾನ್​ ಫ್ಯಾನ್ಸ್​​ಗೆ ಇದು ಸಂತಸದ ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts