More

    ಪರಿಸರ ಸಮತೋಲನಕ್ಕೆ ಸಾವಯವ ಕೃಷಿ ಪರಿಹಾರ

    ಚಿತ್ರದುರ್ಗ: ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾವಯವ ಕೃಷಿಯೊಂದೇ ಪರಿಹಾರ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಹೇಳಿದರು.

    ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿಯ ಪ್ರಗತಿಪರ ರೈತ ಜ್ಞಾನೇಶ್ ಅವರ ಜಮೀನಿನಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ರೈತ ಸಂವಾದ ಉದ್ಘಾಟಿಸಿ ಮಾತನಾಡಿದರು.

    ಪರಿಸರ ಸಮತೋಲನಕ್ಕೆ ಸಾವಯವ ಕೃಷಿಕಯೇ ಮದ್ದು. ಪ್ರಸ್ತುತ ದಿನಗಳಲ್ಲಿ ಸುಸ್ಥಿರ ಕೃಷಿ ಹೆಚ್ಚು ಮಹತ್ವ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ರೈತರು ಸಮರ್ಪಣಾಭಾವ ತೋರಬೇಕು ಎಂದು ಮನವಿ ಮಾಡಿದರು.
    *ಸಾವಯವ ರೆಸ್ಟೊರೆಂಟ್ *

    ಮಾರುಕಟ್ಟೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕು. ಕೃಷಿ ಕುರಿತು ರೈತರು, ನಾಗರಿ ಕರಿಗೆ ತಿಳಿವಳಿಕೆ ನೀಡಬೇಕೆಂಬ ಉದ್ದೇಶದೊಂದಿಗೆ ಚಿತ್ರದುರ್ಗದಲ್ಲಿ ಸಾವಯವ ರೆಸ್ಟೋರೆಂಟ್ ತೆರೆಯಲು ರೈತ ಜ್ಞಾನೇಶ್ ಚಿಂತನೆ ನಡೆಸಿದ್ದಾರೆ. ಅವರಿಗೆ ಸೆಲ್ಕೋ ಫೌಂಡೇಶನ್,ಕೃಷಿ ಇಲಾಖೆ ಅಗತ್ಯ ಸಹಕಾರ ನೀಡಲಿದೆ ಎಂದರು.

    ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್‌ಸಿಂಗ್ ಅವರ ಜನ್ಮ ದಿನವನ್ನು ರೈತ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ.ತ್ತಿದ್ದರೂ 365 ದಿನವೂ ರೈತರ ದಿನವೇ ಆಗಿದೆ. ರೈತರಿಗೆ ಕೃತಜ್ಞತೆ ಅರ್ಪಿಸುವ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

    ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ, ನೈಸರ್ಗಿಕ ಕೃಷಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನುಗಳನ್ನು ರೂಪಿಸಬೇಕು ಎಂದರು.

    ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಹೆಚ್ಚಿನ ಇಳುವರಿ, ಆದಾಯ ಪಡೆಯುವ ಉತ್ಸಾಹದಲ್ಲಿ ಅಧಿಕ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ ಭೂಮಿಯ ಫಲವತ್ತತೆ ಹಾಳಾಗಿದೆ. ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಿ, ಮಣ್ಣಿನ ಸಾರ ವೃದ್ಧಿಸುವ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದರು. ಆತ್ಮ ಯೋಜನೆಯಡಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

    ಪ್ರಗತಿಪರ ರೈತ ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಕೃಷಿ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಸಹಾಯಕ ನಿರ್ದೇಶಕ ಚಂದ್ರಕುಮಾರ್, ಕುಮಾರ್,ತಿಪ್ಪೇಸ್ವಾಮಿ, ಉಷಾ, ಶ್ರೀನಿವಾಸ್ ರೆಡ್ಡಿ, ಪ್ರವೀಣ್ ಚೌಧರಿ, ಗುರುರಾಜ ಆಚಾರ್, (ಮೋಹನ್‌ಭಾಗವತ್, ಚಿದಂಬರಂ,) ಅರುಣಾ, ಬಸ್ತಿಹಳ್ಳಿ ಸುರೇಶ್‌ಬಾಬು, ಧನಂಜಯ, ಮಲ್ಲಿಕಾರ್ಜುನ್, ಪ್ರವೀಣ್ ಮತ್ತಿತರರು ಇದ್ದರು.
    ಸನ್ಮಾನಿತರು
    ತಾಲೂಕು-ಗ್ರಾಮ-ರೈತರ ಹೆಸರು

    ಚಳ್ಳಕೆರೆ-ತೊರೆಕೋಲಮ್ಮಹಳ್ಳಿ-ಕೆ.ಎಂ.ಗಂಗಪ್ಪ
    ಚಳ್ಳಕೆರೆ-ಹಾಲಿಗೊಂಡನಹಳ್ಳಿ-ಕೆ.ವಿ.ರುದ್ರಮುನಿಯಪ್ಪ
    ಮೊಳಕಾಲ್ಮೂರು-ಕೋನಸಾಗರ-ಎಚ್.ಜೆ.ಬಸಯ್ಯ
    ಮೊಳಕಾಲ್ಮೂರು-ದೇವಸಮುದ್ರ-ಸಿ.ಪದ್ಮಾವತಿ
    ಹೊಸದುರ್ಗ-ಹೊಸಕುಂದೂರು-ಪುಟ್ಟಪ್ಪ
    ಹೊಸದುರ್ಗ-ಗವಿರಂಗಾಪುರ-ಶ್ರೀಕಂಠಯ್ಯ
    ಹೊಳಲ್ಕೆರೆ-ಕಾಲಘಟ್ಟ-ಡಿ.ಪ್ರದೀಪ್‌ಕುಮಾರ್
    ಚಿತ್ರದುರ್ಗ-ಗಂಜಿಕಟ್ಟೆ-ಜಿ.ಆರ್.ಅಶೋಕ್
    ಚಿತ್ರದುರ್ಗ-ಬೀರಾಪುರ-ಕೆ.ಬಿ.ರವೀಂದ್ರ
    ಹಿರಿಯೂರು-ಕೂನಿಕೆರೆ-ಲಲಿತಮ್ಮ
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts