More

    ಸಂಗೀತ ಶಾಲೆ ನಡೆಸಿ ಶೇ.50 ಲಾಭ ಗಳಿಸಿ!: ಮನಿಮಾತು

    ಸಂಗೀತ ಶಾಲೆ ನಡೆಸಿ ಶೇ.50 ಲಾಭ ಗಳಿಸಿ!: ಮನಿಮಾತುಕೇವಲ 100 ವಿದ್ಯಾರ್ಥಿಗಳು, ತಿಂಗಳಿಗೆ 1 ಲಕ್ಷ ರೂ. ಆದಾಯ, ಇದು ಸಂಗೀತ ಶಾಲೆ(ಮ್ಯೂಸಿಕ್ ಸ್ಕೂಲ್) ಬಿಸಿನೆಸ್​ನಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದೊಂದು ಹವ್ಯಾಸವಿರುತ್ತದೆ. ಕೆಲವರಿಗೆ ಈ ಹವ್ಯಾಸವೇ ಬಿಸಿನೆಸ್ ಆಗಿರುತ್ತದೆ. ಅದರಲ್ಲಿ ಮ್ಯೂಸಿಕ್ ಕೂಡ ಒಂದು. ಇಂದು ಮ್ಯೂಸಿಕ್ ಎಂಬುದು ಪ್ರತಿಯೊಬ್ಬರ ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿಯೂ ಯುವ ಪಿಳೀಗೆಗೆ ಸಂಗೀತವಿಲ್ಲದೆ ದಿನ ಕಳೆಯುವುದು ಕಷ್ಟಕರವಾಗಿದೆ ಅಂದರೂ ತಪ್ಪಾಗಲಾಗದು.

    ಸಂಗೀತದ ಸಾಮರ್ಥ್ಯ: ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಸಂಗೀತದ ರಾಗ, ತಾಳ, ಲಯಬದ್ಧ ನಾದವು ಈ ಪ್ರಪಂಚದಲ್ಲಿ ಇರುವಂತಹ ಎಲ್ಲ ಸಾಂಸ್ಕೃತಿಕ ಪ್ರಕಾರಗಳಲ್ಲಿ ತನ್ನದೇ ಛಾಪು ಮೂಡಿಸುತ್ತಾ ಬಂದಿದೆ. ಶುಭಕಾರ್ಯಗಳಿಂದ ಹಿಡಿದು ದುಃಖದ ಸನ್ನಿವೇಶದಲ್ಲೂ ಮನಸ್ಸನ್ನು ನಿರಾಳತೆಗೆ ಕೊಂಡೊಯ್ಯುವ ಶಕ್ತಿ ಈ ಸಂಗೀತಕ್ಕಿದೆ. ಸಂಗೀತ ಮನುಷ್ಯನ ಭಾವನೆಗಳನ್ನು ಕೆರಳಿಸುತ್ತದೆ, ಮನಸ್ಸಿನ ನೋವನ್ನು ಮರೆಸಲು ಸಹಾಯಮಾಡುತ್ತದೆ. ಇದನ್ನು ನೋಡಿದರೆ ತಿಳಿಯುತ್ತದೆ ಸಂಗೀತಕ್ಕೆ ಎಷ್ಟು ಸಾಮರ್ಥ್ಯ ಇದೆ ಎಂದು.

    ಮ್ಯೂಸಿಕ್ ಸ್ಕೂಲ್ ಬಿಸಿನೆಸ್: ಇತ್ತೀಚಿನ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಟಿವಿ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯ ಗೊಂಡಿದೆ. ಈ ಕಾರ್ಯಕ್ರಮಗಳ ಮೂಲಕ ಅದೆಷ್ಟೋ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳು ಸೆಲೆಬ್ರಿಟಿಗಳಾಗಿದ್ದಾರೆ. ಸಂಗೀತದ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಮ್ಯೂಸಿಕ್ ಸ್ಕೂಲ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇರುವುದನ್ನು ನಾವು ಗಮನಿಸಬಹುದಾಗಿದೆ. ಸಂಗೀತ ಕ್ಷೇತ್ರದಲ್ಲಿ ವಿವಿಧ ರೀತಿಯ ವೃತ್ತಿ ಅವಕಾಶಗಳೂ ತೆರೆದುಕೊಳ್ಳುತ್ತಿರುವುದರಿಂದ ಇದನ್ನು ಕಲಿಯಲು ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಮ್ಯೂಸಿಕ್ ಸ್ಕೂಲ್ ಅನ್ನು ಸ್ಥಾಪನೆ ಮಾಡಿ ಅದರ ಮೂಲಕ ಅಧಿಕ ಲಾಭ ಗಳಿಸುವ ಬಿಸಿನೆಸ್ ಅನ್ನು ಕಟ್ಟಲು ಸಾಧ್ಯವಿದೆ. ಒಂದು ಅಂಕಿ ಅಂಶದ ಪ್ರಕಾರ ಮ್ಯೂಸಿಕ್ ಎಜುಕೇಶನ್ ಇಂಡಸ್ಟ್ರಿಯು ಮುಂದಿನ ಕೆಲವು ವರ್ಷಗಳಲ್ಲಿ ಒಂದು ಬಿಲಿಯನ್ ಡಾಲರ್ ಗಾತ್ರವನ್ನು ಹೊಂದುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಬಿಸಿನೆಸ್ ಮಾಡಿದರೆ ಯಶಸ್ಸು ಗ್ಯಾರಂಟಿ.

    ಮ್ಯೂಸಿಕ್ ಸ್ಕೂಲ್ ಆರಂಭಕ್ಕೆ ಇದು ತಿಳಿದಿರಬೇಕು

    1. ಮಾರ್ಕೆಟಿಂಗ್ ಮತ್ತು ಸಂಗೀತ ಅಸಕ್ತರ ಗುರುತಿಸುವಿಕೆ: ಮ್ಯೂಸಿಕ್ ಸ್ಕೂಲ್ ಮಾರ್ಕೆಟಿಂಗ್ ಮಾಡುವಾಗ ಬ್ರಾ್ಯಂಡ್ ಬಹಳ ಮಹತ್ವ ಪೂರ್ಣವಾಗಿರುತ್ತದೆ. ಎಲ್ಲಿ, ಯಾವ ರೀತಿಯ ಸಂಗೀತ ಅಸಕ್ತರು ಇದ್ದಾರೆ? ಅದನ್ನು ತಿಳಿದುಕೊಂಡು ಮಾರ್ಕೆಟಿಂಗ್ ಮಾಡಿದರೆ ಉತ್ತಮವಾಗಿರುತ್ತದೆ. ಇದಕ್ಕೆ ಜಾಹೀರಾತು ಅಗತ್ಯವಿದ್ದು, ಕರಪತ್ರಗಳ ವಿತರಣೆ, ರೇಡಿಯೋ ಮತ್ತು ದೂರದರ್ಶನದಲ್ಲಿ ಜಾಹೀರಾತು ನೀಡುವುದು, ಸಂಗೀತ ಕಛೇರಿ ಯೋಜಿಸುವುದು, ಶಿಕ್ಷಕರಿಂದ ಪ್ರದರ್ಶನ ನೀಡುವುದು, ತಮ್ಮದೇ ವೆಬ್​ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ವಿದ್ಯಾರ್ಥಿಗಳ ಪ್ರದರ್ಶನವನ್ನು ವಿಡಿಯೋ ಪೋಸ್ಟ್ ಮಾಡುವುದು ಸೂಕ್ತ.

    2. ಸೂಕ್ತ ಕಟ್ಟಡ ಆಯ್ಕೆ: ಸ್ವಂತ ಕಟ್ಟಡದಲ್ಲಿ ಮ್ಯೂಸಿಕ್ ಸ್ಕೂಲ್ ಮಾಡಿದರೆ ಹೆಚ್ಚು ಅನುಕೂಲ. ಬಾಡಿಗೆ ಕಟ್ಟಡದಲ್ಲಿ ಮಾಡುವಾಗ ಖರ್ಚು ಹೆಚ್ಚು. ಮ್ಯೂಸಿಕ್ ಸ್ಕೂಲ್​ಗೆ

    ಸಾಧ್ಯವಾದಷ್ಟು ವಿಶಾಲವಾಗಿರುವ ಮತ್ತು ಮೂಲ ಸೌಕರ್ಯ ಹೊಂದಿರುವಂಥ ಕಟ್ಟಡದ ಆಯ್ಕೆ ಉತ್ತಮ.

    3. ಮ್ಯೂಸಿಕ್ ಇನ್ಸು್ಟ್ರಮೆಂಟ್ಸ್ ಮತ್ತು ಪೀಠೋಪಕರಣ: ಮ್ಯೂಸಿಕ್(ಸಂಗೀತ)ದಲ್ಲಿ ಅಲ್ಲಿನ ಇನ್ಸು್ಟ್ರಮೆಂಟ್ಸ್​ವಾದ್ಯ)ಗಳು ಬಹಳ ಮುಖ್ಯ, ಆದ್ದರಿಂದ ಮ್ಯೂಸಿಕ್ ಸ್ಕೂಲ್

    ಮಾಡುವಾಗ ಗುಣಮಟ್ಟದ ಇನ್ಸು್ಟ್ರಮೆಂಟ್ಸ್ ಆಯ್ಕೆಗೆ ಗಮನ

    ನೀಡಬೇಕು. ಏಕೆಂದರೆ ಅವು ಉತ್ತಮ ಸ್ಥೀತಿಯಲ್ಲಿರಬೇಕು ಮತ್ತು ಒಳ್ಳೆಯ ಬ್ರ್ಯಾಂಡ್​ ಆಗಿರಬೇಕು. ಕಟ್ಟಡದ ಪೀಠೋಪಕರಣಗಳು ಸೂಕ್ತವಾಗಿರಬೇಕು.

    4. ಉತ್ತಮ ಸಿಬ್ಬಂದಿ ವರ್ಗ: ಮ್ಯೂಸಿಕ್ ಸ್ಕೂಲ್ ಉತ್ತಮ ರೀತಿಯಲ್ಲಿ ನಡೆಯುವುದಕ್ಕೆ ಅಲ್ಲಿನ ಸಿಬ್ಬಂದಿ ಪಾತ್ರ ಅಪಾರವಾಗಿರುತ್ತದೆ. ಗುಣಮಟ್ಟದ ತರಬೇತಿ ನೀಡುವುದಕ್ಕೆ ಅರ್ಹ ತರಬೇತಿದಾರರನ್ನು ನೇಮಿಸುವುದರಿಂದ ಮಾತ್ರ ಯಶಸ್ವಿ ಸಾಧ್ಯ.

    ಮ್ಯೂಸಿಕ್ ಸ್ಕೂಲ್​ನಿಂದ ಎಷ್ಟು ಗಳಿಕೆ ಸಾಧ್ಯ?: ಮ್ಯೂಸಿಕ್ ಸ್ಕೂಲ್ ಅನ್ನು ನಗರ, ಹಳ್ಳಿ ಎರಡೂ ಕಡೆ ನಡೆಸಬಹುದು. ಪ್ರದೇಶದ ಅನುಗುಣವಾಗಿ ಖರ್ಚು ಇರುತ್ತದೆ.

    ಉದಾಹರಣೆಗೆ: 100 ಜನ ದಾಖಲಾದರೆ ಒಬ್ಬರಿಗೆ ತಿಂಗಳಿಗೆ 1,000 ರೂ. ಶುಲ್ಕ ಮಾಡಿದರೂ ತಿಂಗಳಿಗೆ 1 ಲಕ್ಷ ರೂ. ಆದಾಯ ಬರುತ್ತೆ. ಇದರಲ್ಲಿ 25 ಸಾವಿರ ರೂ. ತರಬೇತಿದಾರರ ಸಂಬಳ ಮತ್ತು 25 ಸಾವಿರ ರೂ. ನಿರ್ವಹಣೆ ಖರ್ಚು ತೆಗೆದ್ರು ಶೇ. 50 ಅಂದ್ರೆ ತಿಂಗಳಿಗೆ 50 ಸಾವಿರ ರೂ. ಲಾಭ ದೊರೆಯುತ್ತದೆ. ವರ್ಷಕ್ಕೆ ಎಷ್ಟು ಆದಾಯ ಬರುತ್ತೆ ನೀವೇ ಲೆಕ್ಕ ಹಾಕಿ. ಇಲ್ಲಿ ಆನ್​ಲೈನ್ ಮತ್ತು ಆಪ್​ಲೈನ್ ಎರಡೂ ರೀತಿಯಲ್ಲಿ ಸ್ಕೂಲ್ ನಡೆಸಬಹುದು. ಜತೆಗೆ ನಿಮ್ಮ ಬ್ರಾ್ಯಂಡ್ ಪ್ರಸಿದ್ಧಿ ಪಡೆದುಕೊಂಡರೆ ಅದನ್ನು ಕೂಡ ಫ್ರಾಂಚೈಸಿ ನೀಡಿ ಆದಾಯ ಗಳಿಸಬಹುದು.

    ffreedom appನಲ್ಲಿ ಮಿಲಿಯನ್ ಡಾಲರ್ ಮ್ಯೂಸಿಕ್ ಸ್ಕೂಲ್ ಅನ್ನು ಸ್ಥಾಪಿಸುವುದು ಹೇಗೆ? ಎಂಬ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಸ್ವಾತಂತ್ರ್ಯ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ f್ಟಛಿಛಟಞ ಚಟಟ ಮಿಲಿಯನ್ ಡಾಲರ್ ಮ್ಯೂಸಿಕಲ್ ಸ್ಕೂಲ್ ಅನ್ನು ಸ್ಥಾಪಿಸುವುದು ಹೇಗೆ? ಎಂಬ ಕೋರ್ಸ್ ಸಿದ್ಧಪಡಿಸಿದೆ. ಈ ಕೋರ್ಸ್​ನಲ್ಲಿ ಕರ್ನಾಟಕದ ಪ್ರಸಿದ್ಧ ಪಿಟೀಲು ವಾದಕ ಎಲ್. ಸುಬ್ರಮಣ್ಯಂ ಅವರ ಪುತ್ರಿ ಹಾಗೂ ‘ಸಾಪಾ ಮ್ಯೂಸಿಕ್ ಅಕಾಡೆಮಿ’ ಸಂಸ್ಥಾಪಕರಾಗಿರುವ ಶ್ರೀಮತಿ ಬಿಂದು ಸುಬ್ರಮಣ್ಯಂ ಮಾರ್ಗದರ್ಶ ನೀಡುತ್ತಾರೆ. ಜತೆಗೆ 900ಕ್ಕೂ ಹೆಚ್ಚು ಕೋರ್ಸ್​ಗಳನ್ನು ವೀಕ್ಷಿಸಲು ಈಗಲೇ ffreedom app ಡೌನ್​ಲೋಡ್ ಮಾಡಿ.

    2 ರೀತಿಯಲ್ಲಿ ಈ ಬಿಸಿನೆಸ್

    1- ತಮ್ಮದೇ ಬ್ರಾ್ಯಂಡ್ ನಲ್ಲಿ ಸ್ಕೂಲ್: ತಮ್ಮದೇ ಬ್ರಾ್ಯಂಡ್ ಹುಟ್ಟುಹಾಕಿ ಅದರ ಹೆಸರಿನಲ್ಲಿ, ಸ್ಕೂಲ್ ನಡೆಸá-ವುದು. ಇಲ್ಲಿ ಸಂಪೂರ್ಣ ಜವಾಬ್ದಾರಿ ತಮ್ಮದೇ ಆಗಿರುತ್ತೆ. ಮಾರ್ಕೆಟಿಂಗ್ ನಮ್ಮದೇ ಇರುತ್ತದೆ. ಹೆಚ್ಚು ಪ್ರಚಾರ ಅಗತ್ಯ.

    2- ಫ್ರಾಂಚೈಸಿ ತೆಗೆದುಕೊಳ್ಳುವುದು: ಮ್ಯೂಸಿಕ್​ಗೆ ಬೇಡಿಕೆ ಹೆಚ್ಚಾದಂತೆ ಮ್ಯೂಸಿಕ್ ಸ್ಕೂಲ್ ಬ್ರಾ್ಯಂಡ್​ಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಬ್ರಾ್ಯಂಡ್ ಫ್ರಾಂಚೈಸಿ ತೆಗೆದುಕೊಂಡು ಸ್ಕೂಲ್ ನಡೆಸಬಹುದು.

    ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ f್ಟಛಿಛಟಞ ಚಟಟನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ – 02262116777.

    ಕೋರ್ಸ್​ನಲ್ಲಿ ಏನೇನಿದೆ?

    • ಕೋರ್ಸ್ ಮತ್ತು ಮಾರ್ಗದರ್ಶಕರ ಪರಿಚಯ
    • ಬಿಂದು ಅವರ ಮ್ಯೂಸಿಕ್ ಬಿಸಿನೆಸ್ ಪಯಣ
    • ಮ್ಯೂಸಿಕ್ ಸ್ಕೂಲ್ ಬಿಸಿನೆಸ್ ಸೆಟ್​ಅಪ್ ಮಾಡುವುದು ಹೇಗೆ?
    • ಲೈವ್ ಮ್ಯೂಸಿಕ್ ತರಗತಿ ನಡೆಸುವುದು ಹೇಗೆ?
    • ಸರ್ಕಾರದ ಎನ್​ಇಪಿ ಯೋಜನೆಯಲ್ಲಿ ಮ್ಯೂಸಿಕ್​ನ ಪ್ರಾಮುಖ್ಯತೆ
    • ಮ್ಯೂಸಿಕ್ ಸ್ಕೂಲ್​ನ ವಿವಿಧ ಕಾರ್ಯಕ್ರಮ ಮತ್ತು ಮಾಸ್ಟರ್ ಕ್ಲಾಸ್
    • ಮ್ಯೂಸಿಕ್ ಸ್ಕೂಲ್ ಅನ್ನು ಬ್ರಾ್ಯಂಡಿಂಗ್ ಮಾಡುವುದು ಹೇಗೆ?
    • ಯುನಿಟ್ ಎಕನಾಮಿಕ್ಸ್
    ಸಂಗೀತ ಶಾಲೆ ನಡೆಸಿ ಶೇ.50 ಲಾಭ ಗಳಿಸಿ!: ಮನಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts