More

    ಅನ್ನದಾನ ಮಹಾಕಾರ್ಯ

    ಯಾದಗಿರಿ: ಕರೊನಾ ಲಾಕ್ಡೌನ್ನಿಂದ ಉಂಟಾಗಿರುವ ಸಮಸ್ಯೆಗಳನ್ನು ಜನತೆ ಧೈರ್ಯದಿಂದ ಎದುರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಆ ಮೂಲಕ ರೋಗ ಓಡಿಸಲು ಎಲ್ಲರೂ ಸಕರ್ಾರದ ಜತೆಗೆ ಕೈ ಜೋಡಿಸಬೇಕು ಎಂದು ಡಿವೈಎಸ್ಪಿ ಯು. ಶರಣಪ್ಪ ತಿಳಿಸಿದರು.

    ನವನಂದಿ ಟ್ರಸ್ಟ್ನಿಂದ ನಡೆಸುತ್ತಿರುವ ಅನ್ನದಾಸೋಹ ಕಾರ್ಯಕ್ರಮದ 17ನೇ ದಿನವಾದ ಗುರುವಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಕಂಡು ಕೇಳರಿಯದ ಇಂತಹ ರೋಗದಿಂದ ಸಂಕಷ್ಟಕ್ಕೆ ಈಡಾದ ಸಂದರ್ಭದಲ್ಲಿ ಉದಾರ ಧರ್ಮಕಾರ್ಯ ಮಾಡುವ ಮನಸ್ಸಿನ ವ್ಯಕ್ತಿಗಳು ಮುಂದೆ ಬಂದು ನೆರವು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

    ಆದರೆ ಇಂತಹ ಕಾರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ನಿರಂತರವಾಗಿ ನೆರವಾಗುತ್ತಿರುವ ನವನಂದಿ ಶಿಕ್ಷಣ ಸಂಸ್ಥೆ ಕಾರ್ಯ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

    ಖೇಳಗಿಮಠದ ಮಲ್ಲಿಕಾಜರ್ುನ ಶಾಸ್ತ್ರಿಗಳು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪಿ. ವೇಣುಗೋಪಾಲ, 17ನೇ ದಿನದ ಅನ್ನದಾನಿ ಚಗನ್ ಪ್ರಜಾಪತಿ, ನವನಂದಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಶಿವರಾಯ ಯಲ್ಹೇರಿ, ಶಿವು ಸಾಹುಕಾರ, ಚೆನ್ನಾರೆಡ್ಡಿ ಅಬ್ಬೆತುಮಕೂರು, ಶರಣು ಗಡೇದ ಹತ್ತಿಕುಣಿ, ಸೋಮನಾಥರೆಡ್ಡಿ ವಿ. ಶಿವರಾಯ, ಕೆ. ನಾಗಯ್ಯ ಸ್ವಾಮಿ, ವಿಜಯ ಮೊರಡೆ, ಶರಣು ಕೌಳೂರು, ನರಸಪ್ಪ ನಾಯಕ, ದೈಹಿಕಶಿಕ್ಷಕ ಮಲ್ಲೇಶ ನಾಯಕ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts