More

    ಧೂಳುಮಯವಾದ ಬೇಲೂರು ಮೂಡಿಗೆರೆ ರಸ್ತೆ

    ಮೂಡಿಗೆರೆ: ಬೇಲೂರಿನಿಂದ ಗೆಂಡೆಹಳ್ಳಿ ಮಾರ್ಗವಾಗಿ ಮೂಡಿಗೆರೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿ ಬೀಜುವಳ್ಳಿ ಗ್ರಾಮದ ಸಮೀಪ ಸಂಪೂರ್ಣ ಗುಂಡಿಮಯವಾಗಿರುವುದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
    ಹೆದ್ದಾರಿಯಲ್ಲಿ ನ ಗುಂಡಿಗಳನ್ನು ಮುಚ್ಚುವಂತೆ ಟೀಮ್ ಛತ್ರಮೈದಾನ ತಂಡ ಸದಸ್ಯರು ಕಳೆದ ಮೂರು ತಿಂಗಳ ಹಿಂದೆ ರಸ್ತೆ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಲು 20 ದಿನ ಕಾಲಾವಕಾಶ ನೀಡವಂತೆ ಮನವಿ ಮಾಡಿದ್ದರು.
    ನಂತರ ಹಳೇ ರಸ್ತೆ ಡಾಂಬರ್ ತೆರವುಗೊಳಿಸಿ ರಸ್ತೆಗೆ ಜಲ್ಲಿ ಕಲ್ಲು , ಎಂಸ್ಯಾಂಡ್ ಹಾಕಿ ಗುಂಡಿ ಮುಚ್ಚಿದ್ದರು. ಆದರೆ ಜಲ್ಲಿ ಹಾಕಿದ ಎರಡು ತಿಂಗಳು ಕಳೆದರೂ ಡಾಂಬರ್ ಹಾಕದಿರುವುದರಿಂದ ರಸ್ತೆ ತುಂಬಾ ಧೂಳು ಆವರಿಸಿದೆ. ಈ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಧೂಳಿನಿಂದ ಸಂಚರಿಸಲಾಗದ ಪರಿಸ್ಥಿತಿ ಉಂಟಾಗಿದೆ. ರಸ್ತೆ ಬದಿಯ ಮನೆಗಳ ಕಿಟಕಿ, ಬಾಗಿಲುಗಳನ್ನು ತೆರೆಯದಂತಾಗಿದೆ.
    ಅಧಿಕಾರಿಗಳ ನಿರ್ಲಕ್ಷದಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ದಿನ ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಹೊರಗಿನ ಗಾಳಿ ಇಲ್ಲದೆ ಸ್ಥಳೀಯ ನಿವಾಸಿ ಉಸಿರುಗಟ್ಟಿ ಬದುಕುಂತಾಗಿದೆ. ರಸ್ತೆಯಲ್ಲಿ ದೊಡ್ಡ ವಾಹನ ಸಾಗಿದಾಗ ಇಡೀ ಪ್ರದೇಶ ಧೂಳು ಮಯವಾಗುವುದರಿಂದ ವಾಹನಗಳ ಹಿಂದೆ ಪಾದಾಚಾರಿಗಳು. ದ್ವಿಚಕ್ರ ವಾಹನ ಹೋಗದಂತಾಗಿದೆ. ಈ ರಸ್ತೆಗೆ ಕೂಡಲೇ ಡಾಂಬರ್ ಹಾಕಿ ರಸ್ತೆ ದುರಸ್ತಿ ಪಡಿಸದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts