More

    ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದಾನ ಬಂಧನ: ಕಚ್ಚಾವಸ್ತುಗಳನ್ನು ವಶಪಡಿಸಿಕೊಂಡ ಸಿಸಿಬಿ ಪೊಲೀಸರು

    ಬೆಂಗಳೂರು: ಕರೊನಾ ಪರಿಸ್ಥಿತಿಯ ಲಾಭಗಿಟ್ಟಿಸಿಕೊಳ್ಳಲು ಅಪಾಯಕಾರಿ ರಾಸಾಯನಿಕಗಳನ್ನು ಮನೆಯಲ್ಲಿಟ್ಟುಕೊಂಡು ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಬಂಧಿತನನ್ನು ಶಿವಕುಮಾರ್​ (46) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಶ್ರೀರಾಂಪುರದ ಐದನೇ ಮುಖ್ಯರಸ್ತೆ, 2ನೇ ಕ್ರಾಸ್​ನ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಒಂದರಲ್ಲಿ ಈತ 180 ಲೀಟರ್​ ಐಸೋಪ್ರೊಫೈಲ್​ ಆಲ್ಕೋಹಾಲ್​, 10 ಲೀಟರ್ ಗ್ಲಿಸರಿನ್​, 65 ಲೀಟರ್ ಸರ್ಫೇಸ್​ ಸ್ಯಾನಿಟೈಸರ್​/ಕ್ಲೀನರ್​, 100 ಎಂಎಲ್​ನ 5,382 ಬಾಟಲಿ ಮತ್ತು ಇತರೆ ಕಚ್ಚಾ ಸಾಮಗ್ರಿಗಳನ್ನು ಶೇಖರಿಸಿಟ್ಟಿದ್ದ.

    ಐಸೋಪ್ರೊಫೈಲ್ ಆಲ್ಕೋಹಾಲ್ ಎಂಬುದು ಅತ್ಯಂತ ಅಪಾಯಕಾರಿ ರಾಸಾಯನಿಕವಾಗಿದ್ದು. ಬೆಂಕಿ ತಗುಲಿದಲ್ಲಿ ಬಹಳಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಖಚಿತ ಮಾಹಿತಿ ಮೇರೆಗೆ ನಡೆಸಿದ ಈ ದಾಳಿಯಿಂದ ಸಂಭಾವ್ಯ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್​ಫ್ರಾರೆಡ್ ಫೋರ್​ಹೆಡ್​ ಥರ್ಮಾಮೀಟರ್​ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾತನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts