More

    ತ್ಯಾಜ್ಯ ಕೊಂಪೆ ಆಯ್ತು ಪಾರ್ಕ್, ಸ್ಥಳೀಯರಿಂದಲೇ ನಿರ್ಮಾಣ

    ಉಡುಪಿ: ತ್ಯಾಜ್ಯ ಬೀಳುತ್ತಿದ್ದ ಸ್ಥಳವನ್ನು ಗ್ರಾಮದ ಅಭಿವೃದ್ಧಿ ಕನಸು ಕಂಡ ಯುವಜನತೆ ಸುಂದರ ಪಾರ್ಕ್ ನಿರ್ಮಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ರಾಶಿ ಬೀಳುತ್ತಿದ್ದ ಕಸದ ತಾಜ್ಯಕ್ಕೆ ಮುಕ್ತಿ ಕೊಟ್ಟು ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಬೀಚ್ ಪಾರ್ಕ್ ಈಗ ತಲೆ ಎತ್ತಿದೆ.
    ಮಲ್ಪೆ ಬಡಾನಿಡಿಯೂರು ಗ್ರಾಮದ ಕದಿಕೆಯಲ್ಲಿ ಪ್ರಕೃತಿ ಪ್ರಿಯರಿಗಾಗಿ ಆಸರೆ ಬೀಚ್ ಪಾರ್ಕ್ ನಿರ್ಮಾಣವಾಗಿದೆ. ಕೇವಲ ಹತ್ತು ತಿಂಗಳಲ್ಲಿ ಈ ಪಾರ್ಕ್ ನಿರ್ಮಾಣ ಮಾಡಿರುವುದು ವಿಶೇಷ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಜಾಗವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಪಾರ್ಕ್ ನಿರ್ಮಿಸಲಾಗಿದೆ. ದುರ್ಗಾಂಬಿಕಾ ಯುವಕ ವೃಂದ ಹಾಗೂ ಮಹಿಳಾ ವೃಂದ ಈ ಪಾರ್ಕ್‌ನ ಮುಂದಾಳತ್ವ ವಹಿಸಿ ನಿರ್ಮಾಣ ಮಾಡಿದೆ.

    ತ್ಯಾಜ್ಯ ಎಸೆಯುತ್ತಿದ್ದರು: ಈ ಪ್ರದೇಶದಲ್ಲಿ ಬೇಕಾಬಿಟ್ಟಿ ತ್ಯಾಜ್ಯಗಳನ್ನು ತಂದು ಎಸೆದು ಪರಿಸರ ಹಾಳು ಮಾಡುತ್ತಿದ್ದರು. ಇದನ್ನು ತಪ್ಪಿಸಬೇಕೆಂಬ ನಿರ್ಧಾರದೊಂದಿಗೆ ಇಲ್ಲಿ ಬೀಚ್ ಪಾರ್ಕ್ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದರು. ಸರ್ಕಾರದ ಆರ್ಥಿಕ ನೆರವನ್ನು ಬಯಸದೆ. ದುರ್ಗಾಂಬಿಕಾ ಯುವಕ ವೃಂದ ಹಾಗೂ ಮಹಿಳಾ ವೃಂದ ಖುದ್ದು ಹಣ ಸಂಗ್ರಹಿಸಿ ಪಾರ್ಕ್ ನಿರ್ಮಿಸಿದೆ. ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ಇಲ್ಲಿ ಆಹಾರ ಪದಾರ್ಥ ಸಿಗುವ ವ್ಯವಸ್ಥೆ ಮಾಡಬೇಕೆಂಬ ಆಲೋಚನೆ ಸಂಘಟನೆಯದ್ದಾಗಿದೆ.

    ಬೀಚ್ ಪಾರ್ಕ್ ವಿಶೇಷತೆ: 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬೀಚ್ ಪಾರ್ಕ್‌ನಲ್ಲಿ 6.5 ಅಡಿ ಎತ್ತರವುಳ್ಳ ಸುಭಾಸ್‌ಚಂದ್ರ ಬೋಸ್ ಅವರ ಬೃಹತ್ ಶಿಲಾ ಪ್ರತಿಮೆ ಆಕರ್ಷಕವಾಗಿದೆ. ಉಯ್ಯಲೆ, ಜಾರುಬಂಡಿ ವ್ಯವಸ್ಥೆ, ಕಾಂಕ್ರೀಟ್ ಹಟ್, ಎರಡು ಸೋಗೆ ಹಾಗೂ ಹುಲ್ಲಿನ ಹಟ್, ಪಾರ್ಕ್ ಸುತ್ತಲೂ ಆಲಂಕಾರಿಕ ದ್ವೀಪ, ಪ್ರವಾಸಿಗರಿಗೆ ಕುಳಿತುಕೊಳ್ಳಲು 15 ಸಿಟ್‌ಬೆಂಚ್ ಅಳವಡಿಸಲಾಗಿದೆ. ಪಾರ್ಕ್‌ನ ಸುತ್ತಲೂ ಬಾದಾಮಿ ಹಾಗೂ ಹೊಳೆ ದಾಸವಾಳ ಹೂವಿನ ಗಿಡ ನೆಡಲಾಗಿದೆ.

    18 ಲಕ್ಷ ರೂ ವೆಚ್ಚದಲ್ಲಿ ಪಾರ್ಕ್: ಹನ್ನೊಂದು ತಿಂಗಳ ಹಿಂದೆ ಈ ಪರಿಸರ ಸಂಪೂರ್ಣ ಕಲುಷಿತವಾಗಿತ್ತು. ಲಾಕ್‌ಡೌನ್ ದಿನಗಳಲ್ಲಿ ಈ ಸುಂದರ ಪಾರ್ಕ್ ನಿರ್ಮಾಣ ಮಾಡಿದ್ದೇವೆ. ಗ್ರಾಮದ ಸ್ಥಳೀಯರು, ಯುವಕ ಮಂಡಲ ಸದಸ್ಯರು ಸೇರಿಕೊಂಡು ಶ್ರಮದಾನ ಮಾಡಿದ್ದಾರೆ. ಈ ಪಾರ್ಕ್‌ಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆದಿಲ್ಲ. ಸಾರ್ವಜನಿಕರ ಸಹಕಾರದಲ್ಲಿ 18 ಲಕ್ಷ ರೂ. ಈ ಪಾರ್ಕ್‌ಕ್ಕೆ ವ್ಯಯಿಸಿದ್ದೇವೆ ಎಂದು ದುಗಾಂಬಿಕಾ ಯುವಕ ವೃಂದದ ಗೌರವಾಧ್ಯಕ್ಷ ಪ್ರಭಾಕರ್ ತಿಂಗಳಾಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts