More

    ಚುನಾವಣೆ ವಿಳಂಬವಾಗಿದ್ದರಿಂದ ಗ್ರಾಪಂ ಸದಸ್ಯರಿಗೆ ಡಿಮಾಂಡ್

    ಆಲ್ದೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯದೆ ಮೂರು ವರ್ಷಗಳಾಗುತ್ತ ಬಂದರೂ ಕ್ಷೇತ್ರ ಮರುವಿಂಗಡಣೆ, ಮೀಸಲಾತಿ ಸಮಸ್ಯೆಯಿಂದಾಗಿ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಹಾಗಾಗಿ ಸದ್ಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೇಡಿಕೆ ಉಂಟಾಗಿ, ಕೆಲಸದ ಒತ್ತಡ ಹೆಚ್ಚಾಗುತ್ತಿದೆ.

    ಜಿಪಂ ಹಾಗೂ ತಾಪಂ ಸದಸ್ಯರ ಅಧಿಕಾರ ಅವಧಿ 2021ರ ಮೇ12ಕ್ಕೆ ಮುಕ್ತಾಯವಾಗಿತ್ತು. ಆನಂತರ ಕ್ಷೇತ್ರ ಮರುವಿಂಗಡಣೆ ಮಾಡಿ ಮೀಸಲಾತಿಯನ್ನೂ ಪ್ರಕಟಿಸಲಾಗಿತ್ತು. ಆದರೆ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಹಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಚುನಾವಣೆ ವಿಳಂಬವಾಯಿತು. ಇದರಿಂದ ಜನ ತಮ್ಮ ಕೆಲಸಗಳಿಗೆ ಗ್ರಾಮ ಪಂಚಾಯತಿ ಸದಸ್ಯರನ್ನೇ ಅವಲಂಬಿಸುತ್ತಿದ್ದು, ಸದಸ್ಯರಿಗೆ ಬೇಡಿಕೆ ಬಂದಿದೆ.
    ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್, ಆಸ್ಪತ್ರೆಗಳ, ನೈರ್ಮಲ್ಯ ಸೇರಿ ಹಲವು ಕೆಲಸಗಳು ಜಿಪಂ, ತಾಪಂ ಸದಸ್ಯರ ಅನುದಾನದಲ್ಲಿ ಅಭಿವೃದ್ಧಿಯಾಗುತ್ತವೆ. ಕ್ಷೇತ್ರದ ಶಾಸಕರ ಬಳಿ ಜನರು ಎಲ್ಲ ಅಹವಾಲುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಶಾಸಕರು ಸಹ ಎಲ್ಲ ಸಮಸ್ಯೆಗಳಿಗೆ ಸಂದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ಸರ್ಕಾರ ಚುನಾವಣೆ ನಡೆಸದೆ ವಿಳಂಬ ಮಾಡುತ್ತಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
    ಕ್ಷೇತ್ರ ಮರುವಿಂಗಡಣೆ ಆಗಿದ್ದೇ ತಡ ಆಕಾಂಕ್ಷಿಗಳು ಒಂದು ಸುತ್ತು ಕ್ಷೇತ್ರವನ್ನು ಸುತ್ತಾಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಸರತ್ತು ನಡೆಸಿದ್ದರು. ಕ್ಷೇತ್ರದ ಜನರು ನಡೆಸುವ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ ಮೀಸಲಾತಿ, ಕ್ಷೇತ್ರ ಮರುವಿಂಗಡಣೆಯಲ್ಲಿನ ಗೊಂದಲಗಳಿಂದ ಚುನಾವಣೆ ವಿಳಂಬವಾಗುತ್ತಿದೆ. ಹೀಗಾಗಿ ಆಕಾಂಕ್ಷಿಗಳು ಸಹ ಜನರಿಂದ ಆಂತರ ಕಾಯ್ದುಕೊಳ್ಳುತ್ತಿದ್ದಾರೆ. ಎಲ್ಲ ಗೊಂದಲಗಳು ಬಗೆಹರಿದು ಮೀಸಲಾತಿ ಅಂತಿಮವಾದರೆ ಮಾತ್ರ ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts