More

    ಮೊಟ್ಟೆಯಿಂದ ಹೊರಬಂದ ಬೀಪ್​, ಪೀಪ್​, ಮೀಪ್​!

    ನವದೆಹಲಿ: ಕೋವಿಡ್​-19 ಲಾಕ್​ಡೌನ್​ನಿಂದಾಗಿ ಉದ್ಯೋಗ ಕಡಿತಕ್ಕೆ ಒಳಗಾದ ಮಹಿಳೆಯೊಬ್ಬರು ನಡೆಸಿದ ಪ್ರಯೋಗ ಭರ್ಜರಿ ಯಶಸ್ವಿಯಾಗಿದೆ. ಈ ಪ್ರಯೋಗದಿಂದಾಗಿ ಈಗ ಬೀಪ್​, ಪೀಪ್​ ಮತ್ತು ಮೀಪ್​ ಎಂಬ ಮೂರು ಬಾತುಕೋಳಿಗಳು ಮೊಟ್ಟೆಯೊಡೆದು ಹೊರಬಂದಿವೆ!

    ಈ ಪ್ರಯೋಗ ನಡೆದಿರುವುದು ದೂರದ ಇಂಗ್ಲೆಂಡ್​ನಲ್ಲಿ 29 ವರ್ಷದ ಚಾರ್ಲಿ ಲೆಲ್ಲೋ ಎಂಬುವರು ಸೂಪರ್​ ಮಾರ್ಕೆಟ್​ನಿಂದ ಮೂರು ಬಾತುಕೋಳಿಗಳ ಮೊಟ್ಟೆಗಳನ್ನು ತಂದಿದ್ದರು. ಉದ್ಯೋಗ ಕಡಿತಕ್ಕೆ ಒಳಗಾಗಿದ್ದರಿಂದ, ಬಿಡುವಿನ ಸಮಯವನ್ನು ಅರ್ಥಗರ್ಭಿತವಾಗಿ ಕಳೆಯಲು ನಿರ್ಧರಿಸಿದ್ದ ಅವರು, ಇಂಟರ್​ನೆಟ್​ ಅನ್ನು ತಡಕಾಡಿ, ಸೂಪರ್​ಮಾರ್ಕೆಟ್​ನಿಂದ ತಂದ ಮೊಟ್ಟೆಗಳನ್ನು ಮರಿಯಾಗಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡರು.

    ಇದನ್ನೂ ಓದಿ: ಹೆತ್ತ ಒಡಲ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೇ ಬಾಲೆ?

    ಬಳಿಕ ತಮ್ಮದೇ ಆದ ರೀತಿಯಲ್ಲಿ ಇನ್​ಕ್ಯುಬೇಟರ್​ ಅನ್ನು ಸಿದ್ಧಪಡಿಸಿದ ಅವರು, ಆ ಮೂರು ಮೊಟ್ಟೆಗಳನ್ನು ಅದರೊಳಗೆ ಇರಿಸಿದರು. ಅಂದಾಜು ಒಂದು ಒಂದು ತಿಂಗಳವರೆಗೆ ಇನ್​ಕ್ಯುಬೇಟರ್​ನಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟರು. ಸರಿಯಾಗಿ ಒಂದು ತಿಂಗಳ ಬಳಿಕ ಅವರಿಗೆ ಚಿಂವ್​, ಚಿಂವ್​… ಎಂಬ ಸದ್ದು ಕೇಳಲಾರಂಭಿಸಿತು. ನೋಡಿದರೆ, ಮೂರು ಮೊಟ್ಟೆಗಳನ್ನು ಹೊಡೆದುಕೊಂಡು ಬಾತುಕೋಳಿ ಮರಿಗಳು ನಿಧಾನವಾಗಿ ಹೊರಬರಲಾರಂಭಿಸಿದ್ದವು. ಅವುಗಳಿಗೆ ಬೀಪ್​, ಪೀಪ್​ ಮತ್ತು ಮೀಪ್​ ಎಂದು ಹೆಸರನ್ನಿಟ್ಟು, ಸಾಕಲಾರಂಭಿಸಿದ್ದಾರೆ.

    ನಾನು ಕೆಲಸಕ್ಕೆ ಹೋಗುತ್ತಿದ್ದರೆ ಅದರಲ್ಲೇ ಸಂಪೂರ್ಣ ಸಮಯ ಕಳೆದುಹೋಗುತ್ತಿತ್ತು. ಇಂಥ ಪ್ರಯೋಗಗಳಿಗಾಗಲಿ ಅಥವಾ ಬಾತುಕೋಳಿಗಳನ್ನು ಸಾಕಲಾಗಲಿ ಸಮಯ ಸಿಗುತ್ತಿರಲಿಲ್ಲ. ಕೋವಿಡ್​-19 ಲಾಕ್​ಡೌನ್​ನಿಂದಾಗಿ ಉದ್ಯೋಗ ಕಡಿತಕ್ಕೆ ಒಳಗಾಗಿದ್ದರಿಂದ, ಸಮಯವನ್ನು ಅರ್ಥಗರ್ಭಿತವಾಗಿ ಕಳೆಯಲು ಹೀಗೆ ಮಾಡಿದೆ. ಯಶಸ್ಸು ದಕ್ಕಿತು. ಇದೀಗ ಮರಿಗಳು ದೊಡ್ಡವಾಗುವವರೆಗೂ ಚೆನ್ನಾಗಿ ಸಾಕುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಪಾಕ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಕಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts