More

    ಶೀಘ್ರವೇ ಬರಲಿದೆ ಉದ್ಯಮಶೀಲತಾ ಕೌಶಲಗಳ ಮೇಲೆ ಬೆಳಕು ಚೆಲ್ಲುವ ಡಿಟಿಎಚ್ ಚಾನೆಲ್

    ನವದೆಹಲಿ: ಯುವಜನತೆಯ ಉದ್ಯಮಶೀಲತಾ ಕೌಶಲ್ಯಗಳ ಅಭಿವೃದ್ಧಿಗೆ ಸೂಕ್ತ ವೇದಿಕೆ ಕಲ್ಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಐಸಿಟಿಇ ಸಹಯೋಗದೊಂದಿಗೆ ನಿಗದಿತ ಡಿಟಿಎಚ್ ಚಾನೆಲ್ ಅನ್ನು ಶೀಘ್ರವೇ ಆರಂಭಿಸಲಿದೆ.

    ಈ ಯೋಜನೆ ಅಭಿವೃದ್ಧಿಗೊಳಿಸಲು ಪ್ರಸಾರ ಭಾರತಿಯ ಮಾಜಿ ಮುಖ್ಯಸ್ಥ ಎ ಸೂರ್ಯ ಪ್ರಕಾಶ್ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಉನ್ನತ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಣದ ಸವಾಲುಗಳನ್ನು ಎದುರಿಸಲು ಕೇಂದ್ರ ಡಿಟಿಎಚ್ ಮತ್ತು ರೇಡಿಯೊ ವಿಧಾನಗಳತ್ತ ವಿಶೇಷವಾಗಿ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಯೋಚಿಸಲಾಗಿದೆ.

    ಇದನ್ನೂ ಓದಿ : ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ

    “ಯಾವುದೇ ರಾಷ್ಟ್ರದ ಪ್ರಗತಿಗೆ ನವೋನ್ವೇಷಣೆ ನಿರ್ಧಾರಕ ಅಂಶವಾಗಿದೆ. ನಾವೀನ್ಯತೆಗೆ ಮೀಸಲಾಗಿರುವ ಒಂದು ಪ್ರಮುಖ ಚಾನಲ್ ತರುವಲ್ಲಿ ಕಾರ್ಯನಿರತವಾಗಿರುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಎಐಸಿಟಿಇಯ ಉತ್ತಮ ನಡೆಯಾಗಿದೆ ಎಂದು ಎ ಸೂರ್ಯ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
    ಮುಂದಿನ ವಾರದಿಂದಲೇ ಸಮಿತಿ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ.

    “ ದೇಶದ ಯುವ ಜನತೆಯ ಕೌಶಲ ಅಭಿವೃದ್ಧಿಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಬಲ್ಲ ಚಾನಲ್ ಅನ್ನು ತರುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ದೇಶ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಹಾಗೂ ಇತ್ತೀಚಿನ ಆವಿಷ್ಕಾರ ಮತ್ತು ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ಯುವ ಉದ್ಯಮಿಗಳು ಮಾಡಿದ ಸಾಧನೆಗಳನ್ನು ಸಹ ತೋರಿಸುತ್ತದೆ ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆ ಮರು ಆರಂಭಿಸಿದ ಅಂಚೆ ಇಲಾಖೆ

    ‘ಒನ್ ಕ್ಲಾಸ್ ಒನ್ ಚಾನೆಲ್’ ಯೋಜನೆಯಡಿ ಶಾಲಾ ಮಕ್ಕಳಿಗೆ 12 ಡಿಟಿಎಚ್ ಚಾನೆಲ್‌ಗಳನ್ನು ತರಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಾರ್ಯನಿರತವಾಗಿರುವಾಗಲೇ ಈ ಕ್ರಮದ ಬಗ್ಗೆಯೂ ಯೋಜಿಸಿದೆ.
    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್-19 ಪರಿಹಾರ ಪ್ಯಾಕೇಜ್‌ನಲ್ಲಿ ಒನ್ ಕ್ಲಾಸ್ ಒನ್ ಚಾನೆಲ್ ಯೋಜನೆಯನ್ನು ಉಲ್ಲೇಖಿಸಿದ್ದರು. 

    ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts