More

    VIDEO| ಬೆತ್ತಲೆಯಾಗಿ ದೇವಸ್ಥಾನ ಪ್ರವೇಶಿಸಿದ ಮಹಿಳೆಯಿಂದ ಅಸಭ್ಯ ವರ್ತನೆ!

    ಬ್ಯಾಂಕಾಕ್​: ಪಾನಮತ್ತ ಮಹಿಳಾ ಪ್ರವಾಸಿಯೊಬ್ಬಳು ತನ್ನ ಬಟ್ಟೆಗಳನ್ನೆಲ್ಲ ಕಿತ್ತೆಸೆದು ಬೆತ್ತಲೆಯಾಗಿ ಬೌದ್ಧ ಧರ್ಮದ ದೇವಸ್ಥಾನದ ಕಬ್ಬಿಣದ ಸಲಾಕೆ ಮೇಲೆ ಕುಳಿತು ವಿಚಿತ್ರ ವರ್ತನೆ ತೋರಿದ ಘಟನೆ ಉತ್ತರ ಥಾಯ್ಲೆಂಡ್​ನ ಚಿಯಾಂಗ್​ ಮೈನಲ್ಲಿ ಸೋಮವಾರ ಸಂಜೆ ನಡೆದಿದೆ.

    ಫರಾಹ್​ ಹಖ್​ (28) ಪ್ರವಾಸಿಯ ಹೆಸರು. ಕೈಯಲ್ಲಿ ಬಿಯರ್​ ಬಾಟಲ್​ ಹಿಡಿದು ಬೆತ್ತಲೆಯಾಗಿ ಕುಳಿತು ದಾರಿಹೋಕರನ್ನು ಅಸಭ್ಯ ಪದಗಳಿಂದ ನಿಂದಿಸುವ ವಿಡಿಯೋವೊಂದು ವೈರಲ್​ ಆಗಿದೆ.

    ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ಹತ್ತಿರದ ಸುವಾನ್​ ಪ್ರಂಗ್​ ಮನೋವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಅದಕ್ಕೂ ಮುನ್ನ ಕೈಯಲ್ಲಿ ಬಿಯರ್​ ಬಾಟಲ್​ ಹಿಡಿದು ಅಲ್ಲಾ ಹು ಅಕ್ಬರ್​ ಎಂದು ಪರಿಸುತ್ತಿದ್ದಲ್ಲದೆ, ಚಿಯರ್ಸ್​ ಎನ್ನುತ್ತಿದ್ದ ಮಹಿಳೆ ದಾರಿಹೋಕರನ್ನು ನಿಂದಿಸುತ್ತಾ ಕೂಗಾಡುತ್ತಿದ್ದಳು ಎಂದು ತಿಳಿದುಬಂದಿದೆ.

    ಅಂದಹಾಹೆ ಮಹಿಳೆ ಫರಹಾ ಬಾಂಗ್ಲಾದೇಶ ಮೂಲದವಳು. ಪ್ರಾರಂಭದಲ್ಲಿ ಪ್ರವಾಸಿಗಳಾಗಿ ಚಿಯಾಂಗ್​ ಮೈಗೆ ಆಗಮಿಸಿದ ಫರಹಾ ಕಳೆದ ಏಪ್ರಿಲ್​ನಿಂದ ಇಂಗ್ಲಿಷ್​ ಶಿಕ್ಷಕಿಯಾಗಿ ಅಲ್ಲಿಯೇ ನೆಲಸಿದ್ದು, ನಗರದ ಹಾಸ್ಟೆಲ್​ವೊಂದರಲ್ಲಿ ವಾಸವಿದ್ದಾಳೆಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹೆಚ್ಚಾಗಿ ಮದ್ಯ ಸೇವನೆ ಮಾಡಿದ್ದರಿಂದ ತನ್ನನ್ನು ತಾನೂ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಇದ್ದುದ್ದರಿಂದ ಈ ಸನ್ನಿವೇಶ ಜರುಗಿದೆ. ಹೀಗಾಗಿಯೇ ಆಕೆಗೆ ಮನೋ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಅದರ ವರದಿ ಬಂದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts