More

    ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಿ

    ರಾಯಬಾಗ: ಡ್ರಗ್ಸ ಮಾಫಿಯಾವನ್ನು ರಾಜ್ಯದಲ್ಲಿ ಬಂದ್ ಮಾಡಬೇಕು. ಈ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆ ರಾಯಬಾಗ ಘಟಕದ ಪದಾಧಿಕಾರಿಗಳು ಗುರುವಾರ ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಡ್ರಗ್ಸ ಮಾಫಿಯಾ ಯುವ ಸಮುದಾಯದ ಭವಿಷ್ಯ ಹಾಳು ಮಾಡುತ್ತಿದೆ. ಕ್ರೂರಿ ಡ್ರಗ್ಸ್ ಸೇವನೆ ಚಟಕ್ಕೆ ಲಕ್ಷಾಂತರ ಯುವಕರು ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯವನ್ನು ಡ್ರಗ್ಸ ಮುಕ್ತ ಮಾಡಬೇಕೆಂದು ಆಗ್ರಹಿಸಿದರು.

    ಡ್ರಗ್ಸ ಮಾರಾಟ ಮತ್ತು ಸಾಗಣೆ ಮಾಡುವವರನ್ನು ರಾಷ್ಟ್ರೀಯ ಸುರಕ್ಷತಾ ಕಾಯ್ದೆಯಡಿ ಬಂಧಿಸುವ ಕಾನೂನು ಜಾರಿಗೆ ತರಬೇಕು. ಶಾಲಾ, ಕಾಲೇಜುಗಳ ಸುತ್ತಮುತ್ತಲೂ ಗುಪ್ತಚರ ಇಲಾಖೆ ನಿಯೋಜಿಸಿ ಮಕ್ಕಳಿಗೆ ಅಗತ್ಯ ಸುರಕ್ಷತೆ ನೀಡಬೇಕು ಎಂದು ಒತ್ತಾಯಿಸಿದರು.

    ಜಯದೀಪ ದೇಸಾಯಿ, ಸಿದ್ದು ದೇಸಾಯಿ, ಶಿವಾನಂದ ಬಂತೆ, ಸುನೀಲ ಸೌಂದಲಗಿ, ಅಪ್ಪು ಪವಾರ, ಶ್ರೀನಾಥ ಜಾಧವ, ಸೂರಜ್ ಬಾಕರೆ, ವಿಜಯ ಮಾನೆ, ಪಿಂಟು ಭೋಸಲೆ, ಮುಕುಂದ ಹೊಸಕೊಟೆ, ಸುಧೀರ ಹವಾಲ್ದಾರ್, ಅಜೀತ ಸುತಾರ ಇತರರು ಉಪಸ್ಥಿತರಿದ್ದರು.

    ಬೈಲಹೊಂಗಲ ವರದಿ: ಸಮೀಪದ ಇಂಗಳಗಿ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯಧನ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಎಸಿಗೆ ಗುರುವಾರ ಮನವಿ ಸಲ್ಲಿಸಿದರು.

    ಗ್ರಾಮದಲ್ಲಿ ಸತತ ಮೂರು ದಿನಗಳಿಂದ ಸುರಿದ ಮಳೆಗೆ ಮನೆಗಳ ಗೋಡೆಗಳು ಕುಸಿದಿವೆ. ನೀರು ನುಗ್ಗಿ ತೊಂದರೆ ಆಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತಿದ್ದಾರೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಪುಂಡಲೀಕ ಹೋಟಿ, ಸಿ.ಕೆ.ಮೆಕ್ಕೇದ, ಪರ್ವತಗೌಡ ಚೌಬಾರಿ, ಸೋಮಪ್ಪ ಕಿತ್ತೂರು, ಫಕ್ಕೀರಪ್ಪ ಕಿಲ್ಲೇದ, ಮಾರುತಿ ಪೂಜೇರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts