More

    14 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ, 462 ಎಂಡಿಎಂಎ ಮಾತ್ರೆ, 14 ಗ್ರಾಂ ಹೈಡ್ರೊವಿಡ್ ಗಾಂಜಾ ಪತ್ತೆ

    ಉಡುಪಿ: ಮಾದಕ ವಸ್ತುಗಳ ಪೂರೈಕೆ, ಮಾರಾಟದ ವಿರುದ್ಧ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಸುಳಿವು ಆಧರಿಸಿ ಪೊಲೀಸರು ಮಣಿಪಾಲದಲ್ಲಿ ಗುರುವಾರ ದಾಳಿ ಮಾಡಿ 14.70 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

    244 ಗ್ರಾಂ ತೂಕದ ಒಟ್ಟು 462 ಎಂಡಿಎಂಎ ಮಾತ್ರೆಗಳು ಮತ್ತು 14 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಳೆದ 2 ತಿಂಗಳಲ್ಲಿ ವಿದೇಶದಿಂದ ಆಮದು ಮಾಡಿಕೊಂಡಿರುವ ಹೆಚ್ಚು ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು 5ನೇ ಬಾರಿಗೆ ವಶಪಡಿಸಿಕೊಳ್ಳುತ್ತಿರುವ ಉಡುಪಿ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

    ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್‌ಪಿ ಕಾರ್ಕಳ ಭರತ್ ಎಸ್.ರೆಡ್ಡಿ ಮತ್ತು ಮಣಿಪಾಲ ಪಿಎಸ್ ಐ ಮಂಜುನಾಥ್ ಎಂ. ಗೌಡ ನೇತೃತ್ವದಲ್ಲಿ ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶಂಕರ್ ಮತ್ತು ಪ್ರದೀಪ್ ಕುಮಾರ್, ಪೊಲೀಸ್ ಸಿಬ್ಬಂದಿ ಆದರ್ಶ, ದಯಾಕರ್ ಪ್ರಸಾದ್, ಶುಭ, ಆನಂದಯ್ಯ, ಸುದೀಪ್, ಜಗದೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಮುಂದುವರಿಯಲಿದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts