More

    ಏಕದಿನ ವಿಶ್ವಕಪ್ ಕಡೆಗಣನೆ ಬಳಿಕ ಬ್ಯಾಟ್ ಕೆಳಗಿಟ್ಟು ಹಾಕಿ ಸ್ಟಿಕ್ ಹಿಡಿದ ಜೆಮೀಮಾ ರೋಡ್ರಿಗಸ್!

    ಮುಂಬೈ: ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟುಗಾರ್ತಿ ಎನಿಸುವ ಮೂಲಕ 2017ರಲ್ಲಿ 16ನೇ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನ ಗಮನಸೆಳೆದಿದ್ದ ಜೆಮೀಮಾ ರೋಡ್ರಿಗಸ್, ಬಳಿಕ ಭಾರತ ತಂಡದಲ್ಲೂ ಅವಕಾಶ ಪಡೆದಿದ್ದರು. ಆದರೆ ಇತ್ತೀಚೆಗೆ ಅವರ ಫಾರ್ಮ್ ಕುಸಿದಿದ್ದ ಕಾರಣ ಮುಂಬರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇದರ ಬೇಸರದಲ್ಲೇ ಅವರೀಗ ಹಾಕಿ ಆಟದತ್ತ ಗಮನಹರಿಸಿದ್ದಾರೆ.

    ಭಾರತ ಪರ ಇದುವರೆಗೆ 21 ಏಕದಿನ ಮತ್ತು 47 ಟಿ20 ಪಂದ್ಯ ಆಡಿರುವ ಮಂಗಳೂರು ಮೂಲದ 21 ವರ್ಷದ ಜೆಮೀಮಾ, ಕ್ರಿಕೆಟ್‌ಗೆ ಸಂಪೂರ್ಣ ಗುಡ್‌ಬೈ ಹೇಳಿಲ್ಲ. ಶಾಲಾ ದಿನಗಳಲ್ಲಿ ಹಾಕಿ ಆಟ ಆಡಿದ್ದಲ್ಲದೆ, ಮಹಾರಾಷ್ಟ್ರದ 17 ವಯೋಮಿತಿ ಮಹಿಳಾ ಹಾಕಿ ತಂಡದ ಭಾಗವೂ ಆಗಿದ್ದರು. ಇದೀಗ ಏಕದಿನ ವಿಶ್ವಕಪ್‌ಗೆ ಸ್ಥಾನ ಕೈತಪ್ಪಿರುವ ಬೇಸರವನ್ನು ಕಳೆಯಲು ಅವರು ಮುಂಬೈನ ವಿಲ್ಲಿಂಗ್‌ಡನ್ ಕ್ಯಾಥೊಲಿಕ್ ಜಿಮ್ಖಾನಾ ರಿಂಕ್ ಟೂರ್ನಿಯಲ್ಲಿ ಅಂಕಲ್ಸ್ ಕಿಚನ್ ಯುನೈಟೆಡ್​ ಸ್ಪೋರ್ಟ್ಸ್ ತಂಡದ ಪರ ಹಾಕಿ ಆಡಲು ಸಜ್ಜಾಗಿದ್ದಾರೆ.

    ಕ್ರಿಕೆಟ್‌ನಲ್ಲಿ ಬಿಜಿಯಾಗಿದ್ದ ನಡುವೆಯೂ ಹಾಕಿ ಕೌಶಲವನ್ನು ಮರೆಯದ ಅವರು, ಅತ್ಯುತ್ತಮ ಡ್ರಿಬ್ಲಿಂಗ್ ತಂತ್ರಗಾರಿಕೆ ಹೊಂದಿದ್ದಾರೆ. ಶುಕ್ರವಾರದಿಂದ ಫೆಬ್ರವರಿ 16ರವರೆಗೆ ಈ ಹಾಕಿ ಟೂರ್ನಿ ನಡೆಯಲಿದ್ದು, ಜೆಮೀಮಾ ಟೂರ್ನಿಯ ಪ್ರಮುಖ ಆಕರ್ಷಣೆಯೂ ಆಗಿದ್ದಾರೆ.

    ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡ ಅಹಮದಾಬಾದ್ ತಂಡದ ಹೆಸರು ಅನಾವರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts