More

    ಸಾಕ್ಷಿ ಸಾಬೀತಿಗೆ ಸಮಯ ನಿಗದಿ ಮಾಡಿದ ಡ್ರೋನ್​ ಪ್ರತಾಪ್​: ರಾತ್ರಿ 7ಕ್ಕೆ ಬರ್ತಾರಂತೆ ಯುವ ವಿಜ್ಞಾನಿ

    ಬೆಂಗಳೂರು: ಮಿಕ್ಸಿ ಹಾಗೂ ಟಿವಿ ಬಿಡಿ ಭಾಗಗಳಿಂದ ಸುಮಾರು 600 ಡ್ರೊನ್​ಗಳನ್ನು ತಯಾರಿಸಿದ್ದೇನೆಂದು ಹೇಳಿ ಜನಮನ್ನಣೆ ಗಳಿಸಿ, ಇದೀಗ ನಕಲಿ ವಿಜ್ಞಾನಿ ಎಂಬ ಕುಖ್ಯಾತಿ ಗಳಿಸಿರುವ ಡ್ರೋನ್​ ಪ್ರತಾಪ್​, ತಮ್ಮ ಸಾಧನೆಯನ್ನು ಸಾಬೀತುಪಡಿಸಲು ಕೊನೆಗೂ ಸಮಯ ನಿಗದಿ ಮಾಡಿದ್ದಾರೆ.

    ಕನ್ನಡದ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಇಂದು ರಾತ್ರಿ ಏಳು ಗಂಟೆಗೆ ಲೈವ್​ ಬರುವುದಾಗಿ ಪ್ರತಾಪ್​ ಒಂದು ಗಂಟೆ ಹಿಂದಷ್ಟೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ. ಸಾಕ್ಷಿಯೊಂದಿಗೆ ನಾನು ಲೈವ್​ನಲ್ಲಿ ಬರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಮರುಬಳಕೆ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಹೇಳಿ ಪ್ರಸಿದ್ಧಿಯ ಶಿಖರವೇರಿದ್ದ ಪ್ರತಾಪ್​ ನಿಜಬಣ್ಣ ಇತ್ತೀಚೆಗಷ್ಟೆ ಫ್ಯಾಕ್ಟ್​ಚೆಕ್​ ವರದಿಯಿಂದ ಬಯಲಾಗಿತ್ತು. ಪ್ರತಾಪ್​ ಯಾವುದೇ ಡ್ರೋನ್​ ಕಂಡುಹಿಡಿದಿಲ್ಲ. ಆತನ ಹೆಸರಲ್ಲಿ ಪ್ರಶಸ್ತಿಗಳು ಇಲ್ಲ. ಅಲ್ಲದೆ, ಡಿಗ್ರಿಯಲ್ಲಿ ಎರಡು ವಿಷಯ ಬಾಕಿ ಇದೆ. ಎಲ್ಲಿಯೂ ತಾನು ತಯಾರಿಸಿದ ಡ್ರೋನ್​ ಪ್ರದರ್ಶನ ಮಾಡಿಲ್ಲ ಹೀಗೆ ಸಾಕಷ್ಟು ಆರೋಪಗಳ ಕೇಳಿಬಂದಿದ್ದವು.

    ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್​ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಅನೇಕ ನೆಟ್ಟಿಗರು ಪ್ರತಾಪ್​ ಬಳಿ ಸಾಕ್ಷಿ ಕೇಳಿದ್ದರು. ಇದೀಗ ಅದಕ್ಕೆಲ್ಲ ಉತ್ತರ ಎಂಬಂತೆ ಇಂದು ಏಳು ಗಂಟೆಗೆ ಕನ್ನಡ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಲೈವ್​ ಬರುವುದಾಗಿ ಪ್ರತಾಪ್​ ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts