More

    ಹಾಸಿಗೆ ಮೀಸಲಿಡುವ ವ್ಯವಸ್ಥೆಗೆ ಚಾಲನೆ ; ಕೊರತೆ ಆರೋಪಗಳಿಗೆ ಅವಕಾಶ ನೀಡದಿರಲು ಮುನ್ನೆಚ್ಚರಿಕೆ

    ಚಿಕ್ಕಬಳ್ಳಾಪುರ : ಹಾಸಿಗೆ ಕೊರತೆಯ ಆರೋಪಗಳಿಗೆ ಅವಕಾಶ ನೀಡದಿರಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜಧಾನಿ ಬೆಂಗಳೂರು ಮಾದರಿಯಲ್ಲಿ ಜಿಲ್ಲೆಯಲ್ಲೂ ಸೆಂಟ್ರಲ್ ಹೆಲ್ತ್ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂ ಮೂಲಕ ಹಾಸಿಗೆ ಮೀಸಲಿಡುವ ವ್ಯವಸ್ಥೆ ಜಾರಿಗೆಗೆ ತಂದಿದೆ.

    ಜಿಲ್ಲೆಯಲ್ಲಿ 5 ಸಾವಿರ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 3588 ಕ್ಕೆ ಇಳಿದಿದೆ. ಇನ್ನು ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಶೇ.80ರಷ್ಟು ಹಾಸಿಗೆ ಭರ್ತಿಯಾಗಿವೆ. ಇದರ ನಡುವೆ ಹಾಸಿಗೆ ಕೊರತೆಯ ಆರೋಪಗಳಿಗೆ ಅವಕಾಶ ನೀಡದಿರಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

    ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 115 ಸಾಮಾನ್ಯ ಹಾಸಿಗೆ, 427 ಆಕ್ಸಿಜನ್ ಬೆಡ್, ಎಚ್‌ಡಿಯು ವಿತ್ ಒ2 ಹಾಸಿಗೆ 18, ಐಸಿಯು ವಿತ್ ವೆಂಟಿಲೇಟರ್ 48, ಐಸಿಯು 2 ಸೇರಿ 610 ಹಾಸಿಗೆಗಳಿವೆ. ಇನ್ನು ಇತ್ತೀಚೆಗೆ ಸರ್ಕಾರ 30 ವೆಂಟಿಲೇಟರ್ ನೀಡಿದೆ.

    ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಜಿಲ್ಲಾಡಳಿತ ಈಗಾಗಲೇ ಜೈನ್ ಆಸ್ಪತ್ರೆ ಮತ್ತು ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಆಸ್ಪತ್ರೆಯನ್ನು ಸೋಂಕಿನ ಚಿಕಿತ್ಸೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಅನನ್ಯ, ಸುರಕ್ಷಾ, ಸಿಎಸ್‌ಐ ಸೇರಿ ಕೆಲ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಲಭಿಸುತ್ತಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ : ಜಿಲ್ಲಾಸ್ಪತ್ರೆ-250, ಬಾಗೇಪಲ್ಲಿ ತಾಲೂಕು ಆಸ್ಪತ್ರೆ-53, ಚಿಂತಾಮಣಿ ತಾಲೂಕು ಆಸ್ಪತ್ರೆ-100, ಗುಡಿಬಂಡೆ ತಾಲೂಕು ಆಸ್ಪತ್ರೆ-50, ಶಿಡ್ಲಘಟ್ಟ ತಾಲೂಕು ಆಸ್ಪತ್ರೆ-49, ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ-108.

    ಜಿಲ್ಲೆಯಲ್ಲಿ ಸೋಂಕಿತರಿಗೆ ಆಸ್ಪತ್ರೆ ಮತ್ತು ಕೇರ್ ಸೆಂಟರ್‌ಗಳಲ್ಲಿ ಸುಲಭವಾಗಿ ಹಾಸಿಗೆ ಸಿಗಬೇಕು ಎಂಬ ಉದ್ದೇಶದಿಂದ ಸೆಂಟ್ರಲ್ ಹೆಲ್ತ್ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂ ಜಾರಿಗೆ ತರಲಾಗಿದೆ. ಇದರ ನಿರ್ವಹಣೆ ಜಿಲ್ಲಾ ಕರೊನಾ ನಿಯಂತ್ರಣ ಕೊಠಡಿಗೆ ವಹಿಸಲಾಗಿದೆ.
    ಇಂದಿರಾ ಆರ್.ಕಬಾಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts