More

    ಡಿಜಿಟಲ್ ಆರ್ಟ್ ಕಲಾ ಪ್ರದರ್ಶನಕ್ಕೆ ಚಾಲನೆ

    ಮೈಸೂರು: ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್, ಶ್ರೀ ಕಲಾನಿಕೇತನ ದೃಶ್ಯಕಲಾ ಮಹಾವಿದ್ಯಾಲಯ ವತಿಯಿಂದ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ‘ಡಿಜಿಟಲ್ ಆರ್ಟ್’ ಕಲಾ ಪ್ರದರ್ಶನಕ್ಕೆ ಚಾಲನೆ ದೊರೆಯಿತು.

    ಪ್ರದರ್ಶನದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ‘ಡಿಜಿಟಲ್ ಆರ್ಟ್’ ಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ಸಾರ್ವಜನಿಕರು ಮಾ.21ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಪ್ರದರ್ಶನ ವೀಕ್ಷಿಸಬಹುದಾಗಿದೆ.

    ಪ್ರದರ್ಶನಕ್ಕೆ ಯೋಗೀಶ್ ಎಂ.ಪಾಟೀಲ್ ಚಾಲನೆ ನೀಡಿದರು. ಆರ್.ಪ್ರವೀಣ್, ವಿನಯ್, ಪ್ರಾಚಾರ್ಯ ಕೆ.ಸಿ.ಮಹದೇವ ಶೆಟ್ಟಿ, ಉಪನ್ಯಾಸಕ ಆರ್.ಡಿ.ಮಂಜುನಾಥ್, ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಕಾರ್ಯದರ್ಶಿ ಬಾಬುರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts