More

    ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ

    ಮಂಡ್ಯ: ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರು ಐದು ತಾಲೂಕಿನ 2023-24ನೆ ಸಾಲಿನ ತುರ್ತು ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರು.

    ಕೆ.ಆರ್.ಪೇಟೆ ತಾಲೂಕಿನಲ್ಲಿ ಕೊಟಗಹಳ್ಳಿ, ಹೆಮ್ಮಡಹಳ್ಳಿ, ಹಂಗರಮುದ್ದನಹಳ್ಳಿ, ತೊಳಸಿ ಗೇಟ್, ಸಾಸಲು, ಸಾಸಲು ಕೊಪ್ಪಲು, ಮುರುಕನಹಳ್ಳಿ ಮತ್ತು ಮಾದಾಪುರ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿ, ನಾಗರಘಟ್ಟ ಗ್ರಾಮದಲ್ಲಿ ಹಾಲಿ ಇರುವ ಕೊಳವೆ ಬಾವಿಯನ್ನು ರೀಡ್ರಿಲ್ ಮಾಡುವ ಕಾಮಗಾರಿ, ನಾಯಕನಹಳ್ಳಿ ಗ್ರಾಮದಲ್ಲಿ ರೈಸಿಂಗ್ ಮೈನ್ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಒಟ್ಟು 15 ಲಕ್ಷ ರೂ, ಮದ್ದೂರು ತಾಲೂಕಿನಲ್ಲಿ ಕೆ.ಎಂ.ದೊಡ್ಡಿ, ಕೋಡಿದೊಡ್ಡಿ ಗ್ರಾಮದಲ್ಲಿ ಕೊಳವೆ ನೀರು ಸರಬರಾಜು ಯೋಜನೆ ಸುಧಾರಣೆ ಕಾಮಗಾರಿ, ಮಹನವಮಿದೊಡ್ಡಿ ಗ್ರಾಮದಲ್ಲಿ ಹಾಲಿ ಕರೆದಿರುವ ಕೊಳವೆ ಬಾವಿಯಿಂದ ಮೇಜರ್ ಟ್ಯಾಂಕ್ ರವರಿಗೆ ಪೈಪ್ ಲೈನ್ ಕಾಮಗಾರಿ, ಡಿ ಮಲ್ಲಿಗೆರೆ ಗ್ರಾಮದಲ್ಲಿ ಕೊಳವೆ ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆದು ಪೈಪ್ ಲೈನ್ ಅಳವಡಿಸುವ ಕಾಮಗಾರಿ ಒಟ್ಟು 14.28 ಲಕ್ಷ ರೂ, ಪಾಂಡವಪುರ ತಾಲೂಕಿನಲ್ಲಿ ನಾರ್ಥ್ ಬ್ಯಾಂಕ್, ಹೊಸಯರಗನಹಳ್ಳಿ, ಮಾಣಿಕ್ಯನಹಳ್ಳಿ, ಶಂಭೂನಹಳ್ಳಿ, ಕಾಡೇನಹಳ್ಳಿ, ಕಟ್ಟೇರಿ, ಲಕ್ಷ್ಮಿಸಾಗರ, ಬಳ್ಳಾಳೆ, ಸಿಂಗಾಪುರ, ನಾರಾಯಣಾಪುರ, ಮೇಲುಕೋಟೆ ಗ್ರಾಮಗಳಲ್ಲಿ ಒಟ್ಟು 14 ಲಕ್ಷ ರೂ ಅಂದಾಜು ಮೊತ್ತದಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

    ಮಳವಳ್ಳಿ ತಾಲೂಕಿನಲ್ಲಿ ಕ್ಯಾತನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಯಿಂದ ಒಎಚ್ಟಿವರೆಗೆ ಏರು ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ, ಹೊಸಪುರ, ರಾಮಂದೂರು, ಜೂಗನಹಳ್ಳಿ, ಕಿರುಗಾವಲು ಮತ್ತು ಮಾರಗೌಡನಹಳ್ಳಿ ಗ್ರಾಮಗಳಲ್ಲಿ ಕೊಳವೆ ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆಯುವುದು, ಬಸವನಹಳ್ಳಿ ಮತ್ತು ಹೊಸದೊಡ್ಡಿ ಗ್ರಾಮದಲ್ಲಿ ಕಿರು ನೀರು ಸರಬರಾಜು ಯೋಜನೆಗೆ ಕೊಳವೆಬಾವಿ ಕೊರೆಯುವುದು ಒಟ್ಟು 14 ಲಕ್ಷ ರೂ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಗಾಮನಹಳ್ಳಿ, ಮೇಳಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪುನಶ್ಚೇತನ ಕಾಮಗಾರಿ, ಕೊಡಿಯಾಲ, ಬೆಳವಾಡಿ ಗ್ರಾಮ ಪರಿಮಿತಿಯಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿ, ತಡಗವಾಡಿ ಗ್ರಾಮದಲ್ಲಿ ಹೊಸದಾಗಿ ಕೊರೆದ ಕೊಳವೆ ಬಾವಿಗೆ ಪಂಪ್ ಮೋಟರ್ ಅಳವಡಿಸುವ ಕಾಮಗಾರಿ, ದೊಡ್ಡಹಾರೋಹಳ್ಳಿ ಗ್ರಾಮದಲ್ಲಿ ಕೊಳವೆಬಾವಿ ಕೊರೆಯುವ ಹಾಗೂ ಪೈಪ್ಲೈನ್ ಕಾಮಗಾರಿ ಒಟ್ಟು 14 ರೂ ಲಕ್ಷ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಯಿತು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಮ್ಮಣ್ಣ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್. ನಿರ್ಮಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts