More

    ಕೆರೆಗಳ ಹೂಳೆತ್ತಲು ಪರಿಸರ ಉಳಿಸಿ ಸಮಿತಿ ಆಗ್ರಹ

    ಮೈಸೂರು: ಕೆರೆ ಸಂರಕ್ಷಣೆಯಿಂದ ತಾಪಮಾನ ಏರಿಕೆ, ಬರಗಾಲ, ಅಂತರ್ಜಲ ಕುಸಿತ ತಡೆಗೆ ಸಹಕಾರಿಯಾಗಿದ್ದು, ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣಾ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಜಿಲ್ಲೆಯಲ್ಲಿ ಬರಗಾಲದಿಂದ ಕೆರೆಗಳು ಬರಿದಾಗಿದ್ದು, ಈ ಸಂದರ್ಭವನ್ನು ಬಳಸಿಕೊಂಡು ಕೆರೆಗಳ ಹೂಳೆತ್ತುವ ಕಾರ್ಯ ಮಾಡಬೇಕು ಎಂದು ಪರಿಸರ ಉಳಿಸಿ ಸಮಿತಿ ಸಂಚಾಲಕ ಕಿರಣ್ ಆಗ್ರಹಿಸಿದ್ದಾರೆ.

    ಕೆರೆ ಅಭಿವೃದ್ಧಿಗೆ ಕೋಟ್ಯಾಂತರ ಅನುದಾನ ಬಿಡುಗಡೆಯಾಗುತ್ತಿದ್ದು, ಅನುದಾನ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ. ಹೀಗಾಗಿ ಕೆರೆ, ಕುಂಟೆ, ಕಲ್ಯಾಣಿಗಳು ಸಂರಕ್ಷಣೆ ಆಗುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ಕುಸಿತ ಕಾಣುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

    ಶಾಲಾ ಕಾಲೇಜುಗಳಲ್ಲಿ ಪರಸರ ಕುರಿತ ಪಠ್ಯದ ವಿಷಯ ಸೇರಿಸಬೇಕು, ಆ ಮೂಲಕ ಮಕ್ಕಳಲ್ಲಿ ಪರಿಸರದ ಪ್ರೀತಿ ಬೆಳೆಸಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹೆಚ್ಚು ಹೆಚ್ಚಾಗಿ ಗಿಡಮರಗಳನ್ನು ಬೆಳೆಸಬೇಕು, ಇಂಗು ಗುಂಡಿಗಳನ್ನು ನಿರ್ಮಿಸಬೇಕು, ಗುಡಿಗೋಪುರ ನಿರ್ಮಾಣ ಬದಲು ಕೆರೆ ಕಟ್ಟೆ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಸಮಿತಿ ಪದಾಧಿಕಾರಿಗಳಾದ ಸತೀಶ್, ಅರ್ಚನಾ, ಸೈಯ್ಯದ್ ಇಸಾಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts