More

    ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದ ಸಿಬ್ಬಂದಿಗೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ನೀಡಿದ ಟಿಪ್ಸ್ ಎಷ್ಟು ಗೊತ್ತೇ?

    ಕಾನ್ಪುರ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ವ್ಯಕ್ತಿತ್ವದ ಮೂಲಕ ಹೆಸರಾಗಿರುವ ಮುಖ್ಯಕೋಚ್ ರಾಹುಲ್ ದ್ರಾವಿಡ್, ಇಂದಿನ ಯುವ ಪೀಳಿಗೆ ಆಟಗಾರರಿಗೆ ಮಾದರಿಯಾಗಿದ್ದಾರೆ. ಕ್ರಿಕೆಟ್ ಆಡುವ ದಿನಗಳಲ್ಲಿ ಶಿಸ್ತಿಗೆ ಹೆಸರಾಗಿದ್ದ ದ್ರಾವಿಡ್ ಈಗಲೂ ಅದನ್ನೇ ಪಾಲಿಸಿಕೊಂಡು ಬಂದಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಸೀನಿಯರ್ ತಂಡ ಮೊದಲ ಬಾರಿಗೆ ತವರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿದೆ. ಗ್ರೀನ್‌ಪಾರ್ಕ್ ಮೈದಾನದ ಸಿಬ್ಬಂದಿಗೆ 35 ಸಾವಿರ ರೂಪಾಯಿಯನ್ನು ಟಿಪ್ಸ್ ರೂಪದಲ್ಲಿ ನೀಡಿದ್ದಾರೆ. ಶಿವಕುಮಾರ್ ಸಾರಥ್ಯದ ಮೈದಾನದ ಸಿಬ್ಬಂದಿ ಮೊದಲ ಟೆಸ್ಟ್ ಪಂದ್ಯಕ್ಕೆ ಪಿಚ್ ಸಿದ್ಧಪಡಿಸಿತ್ತು. ಇಂಥ ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ರಾಹುಲ್, ಮೈದಾನದ ಸಿಬ್ಬಂದಿಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಬಹುಮಾನ ರೂಪದಲ್ಲಿ ಈ ಮೊತ್ತ ನೀಡಿದ್ದಾರ ಎಂದು ವರದಿಯಾಗಿದೆ.

    ‘ದ್ರಾವಿಡ್ ನೀಡಿದ ಮೊತ್ತವನ್ನು ಅಧಿಕೃತವಾಗಿ ಘೋಷಿಸಲು ಬಯಸುತ್ತೇವೆ. ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35 ಸಾವಿರ ಮೊತ್ತ ನೀಡಿದ್ದಾರೆ’ ಎಂದು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಪ್ರಕಟಿಸಿದೆ. ಸ್ವತಃ ದ್ರಾವಿಡ್ ಈ ವಿಷಯವನ್ನು ಎಲ್ಲೂ ಬಹಿರಂಗ ಪಡಿಸದಿದ್ದರೂ ಯುಪಿಸಿಎ ಹೇಳಿಕೊಂಡಿದೆ. ಸಾಮಾನ್ಯವಾಗಿ ಪಂದ್ಯ ಮುಗಿದ ಮೇಲೆ ಮೈದಾನದ ಸಿಬ್ಬಂದಿಗೆ ಟಿಪ್ಸ್ ನೀಡುವುದು ತಂಡಗಳ ವಾಡಿಕೆ, ದ್ರಾವಿಡ್ ಕೂಡ ಅದೇ ಮಾದರಿ ಅನುಸರಿಸಿದರೂ ವೈಯಕ್ತಿಕವಾಗಿ ಈ ಮೊತ್ತ ನೀಡಿದ್ದಾರೆ.

    ಕಾನ್ಪುರದಲ್ಲಿ ಗೆಲುವಿನ ಉತ್ಸಾಹದಲ್ಲಿದ್ದ ಭಾರತ ತಂಡ ಡ್ರಾನಲ್ಲಿ ತೃಪ್ತಿಪಟ್ಟುಕೊಂಡಿತು. ಆತಿಥೇಯ ಭಾರತ ತಂಡ ಅಂತಿಮ ಕ್ಷಣದವರೆಗೆ ಗೆಲುವಿಗಾಗಿ ಪ್ರಬಲ ಪೈಪೋಟಿ ತೋರಿದರೂ ಪ್ರವಾಸಿ ನ್ಯೂಜಿಲೆಂಡ್ ಬಾಲಂಗೋಚಿ ಬ್ಯಾಟರ್‌ಗಳ ದಿಟ್ಟ ಹೋರಾಟದ ಲವಾಗಿ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತು. ಇದರಿಂದ ಭಾರತ 2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಪೂರ್ಣ 12 ಅಂಕ ಗಳಿಸುವುದರಿಂದಲೂ ವಂಚಿತವಾಗಿ, ಕಿವೀಸ್ ಜತೆಗೆ ತಲಾ 4 ಅಂಕ ಹಂಚಿಕೊಂಡಿತು.

    ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ತಂಡವೊಂದರ ಪಾಲಾಗಲಿದ್ದಾರೆ ಕನ್ನಡಿಗ ಕೆಎಲ್ ರಾಹುಲ್..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts