More

    ಎಚ್ಚರ ಬಾಯ್ತೆರೆದುಕೊಂಡಿವೆ ಚರಂಡಿಗಳು! 25-30 ಕಡೆ ಸ್ಲಾೃಬ್ ಕುಸಿದು ಆತಂಕ

    -ಅವಿನ್ ಶೆಟ್ಟಿ ಉಡುಪಿ

    ನಗರದ ವಿವಿಧ ಕಡೆ ಕಾಂಕ್ರೀಟ್ ಚರಂಡಿ ಸ್ಲಾೃಬ್‌ಗಳು ಬಾಯ್ತೆರೆದುಕೊಂಡಿದ್ದು ಜನ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಾದಿದೆ. ಕೆಲವು ಕಡೆ ಬಿರುಕು ಬಿಟ್ಟಿದ್ದರೆ, ಕೆಲವೆಡೆ ಸ್ಲಾೃಬ್‌ಗಳು ಕುಸಿದಿವೆ ಎಂದು ನಾಗರಿಕರು ಆರೋಪಿಸಿದ್ದಾರೆ.

    ಕೆಎಸ್‌ಆರ್‌ಟಿಸಿ ಬಸ್‌ಸ್ಟಾೃಂಡ್ ಬಳಿ ಮಳೆ ನೀರು ಹರಿಯುವ ಚರಂಡಿ, ಬನ್ನಂಜೆ-ಉಡುಪಿ ರಾಷ್ಟ್ರೀಯ ಹೆದ್ದಾರಿ ರಸ್ತೆ, ಜೋಡುಕಟ್ಟೆ ಮೆಡಿಕಲ್ ಸೆಂಟರ್ ಎದುರಿನ ಬೃಹತ್ ಗಾತ್ರದ ನೀರಿನ ಒಳಚರಂಡಿ ಹಾದುಹೋಗುವ ಮಾರ್ಗದಲ್ಲಿ ಚರಂಡಿ ಮೇಲೆ ಅಳವಡಿಸಿರುವ ಕಾಂಕ್ರೀಟ್ ಸ್ಲಾೃಬ್‌ಗಳು ಬಿರುಕು ಬಿಟ್ಟಿದ್ದು, ಕೆಲವು ಕಡೆ ತುಂಡಾಗಿವೆ.

    ಕಿದಿಯೂರು ಹೋಟೆಲ್ ಮಾರ್ಗವಾಗಿ ಕುಂದಾಪುರಕ್ಕೆ ತಿರುವು ಪಡೆಯುವ ಶಿರಿಬೀಡು ಬನ್ನಂಜೆ ರಸ್ತೆ ಕ್ರಾಸ್‌ನಲ್ಲಿ ಒಳಚರಂಡಿ ಕಾಂಕ್ರೀಟ್ ಓವರ್ ಸ್ಲಾೃಬ್ ಬಾಯ್ತೆರೆದುಕೊಂಡಿದೆ. ಕಲ್ಸಂಕ-ಅಂಬಾಗಿಲು ರಸ್ತೆ ಗುಂಡಿಬೈಲು ಪ್ರದೇಶದಲ್ಲೂ ಚರಂಡಿಗಳು ಅಪಾಯ ಆಹ್ವಾನಿಸುತ್ತಿವೆ. 25ರಿಂದ 30ರಷ್ಟು ಒಳಚರಂಡಿ ಓವರ್ ಸ್ಲಾೃಬ್‌ಗಳು ಕುಸಿತಗೊಂಡಿದ್ದು ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

    ತಡೆಗೋಡೆ ಇಲ್ಲದ ಚರಂಡಿ: ಮಳೆ ನೀರು ಹರಿಯಲು ನಿರ್ಮಿಸಿರುವ ಚರಂಡಿ ಕೆಲವು ಕಡೆ ಅಪಾಯಕಾರಿಯಾಗಿವೆ. ಅಂಬಾಗಿಲು ಕಲ್ಸಂಕದಲ್ಲಿ ಚರಂಡಿ ಎರಡು ಕಿ.ಮೀ ಉದ್ದ ಬಾಯ್ತೆರೆದು ಅಪಾಯ ಆಹ್ವಾನಿಸುತ್ತಿದೆ. ಅವಘಡಕ್ಕೆ ಕಾರಣವಾಗಬಹುದಾದ ಈ ಚರಂಡಿಯನ್ನು ಕಾಂಕ್ರೀಟ್ ಸ್ಲಾೃಬ್‌ನಿಂದ ಮುಚ್ಚಬೇಕು ಇಲ್ಲವೇ ತಡೆಗೋಡೆ ಎತ್ತರವಾಗಿಸಬೇಕಿತ್ತು ಎನ್ನುತ್ತಾರೆ ಜನ. ನಗರಸಭೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಹೊಸದಾಗಿ ಕಾಮಗಾರಿ ನಿರ್ವಹಿಸಿದ ಚರಂಡಿಗಳಿಗೆ ಹಾನಿಯಾಗಿಲ್ಲ. ಕೆಲವು ಒಳಚರಂಡಿ ಕಾಂಕ್ರೀಟ್ ಓವರ್ ಸ್ಲಾೃಬ್ ಕುಸಿತವಾಗಿರುವ ಬಗ್ಗೆ ಪರಿಶೀಲಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಲಾಗುವುದು. ಬಳಿಕ ದುರಸ್ತಿ ಕೈಗೊಳ್ಳಲಾಗುವುದು.
    -ಆನಂದ್ ಸಿ.ಕಲ್ಲೋಳಿಕರ್, ಪೌರಾಯುಕ್ತ ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts