More

    ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು

    ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

    ಶಿಗ್ಗಾಂವಿ-ಸವಣೂರ ರಸ್ತೆಯ ಜೆಎಂಜೆ ಶಿಕ್ಷಣ ಸಂಸ್ಥೆಯ ಹತ್ತಿರ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

    ಪಟ್ಟಣದ ಬಹುತೇಕ ವಾರ್ಡ್​ಗಳ ನೀರು ಈ ಮೊದಲು ಫಾರೂಕ್ ಲೇಔಟ್ ಹತ್ತಿರದ ಚರಂಡಿಯ ಮೂಲಕ ದೊಡ್ಡ ನಾಲೆ ಸೇರುತ್ತಿತ್ತು. ಆದರೆ, ಇತ್ತೀಚೆಗೆ ಹೊಸ ಬಡಾವಣೆಗಳ ನಿರ್ಮಾಣ ಮತ್ತು ಸವಣೂರ ರಸ್ತೆ ಅತಿಕ್ರಮಣದಿಂದ ಚರಂಡಿ ನೀರು ಸರಾಗವಾಗಿ ನಾಲೆಯನ್ನು ಸೇರದೆ ಹೊಲಗಳಲ್ಲಿ ಹರಿಯುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಪಟ್ಟಣದ ತ್ಯಾಜ್ಯವೆಲ್ಲ ಜಮೀನುಗಳಲ್ಲಿ ಸೇರಿ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಿದ್ದರಿಂದ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರು ಹೊಲಗಳಿಗೆ ನೀರು ಬರದಂತೆ ತಡೆದಿದ್ದಾರೆ. ಇದರಿಂದ ಚರಂಡಿ ನೀರು ನಾಲೆ ಸೇರದೆ ರಸ್ತೆ ಮೇಲೆ ಹರಿಯುತ್ತಿದೆ.

    ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮುಖ್ಯ ರಸ್ತೆಯ ಅನತಿ ದೂರದಲ್ಲೇ ಗೃಹ ಸಚಿವರ ಮನೆ ಇದೆ. ಇದೇ ಮಾರ್ಗವಾಗಿ ನಿತ್ಯ ಸಂಚರಿಸುವ ತಾಲೂಕಿನ ಮತ್ತು ಶಿಗ್ಗಾಂವಿ-ಸವಣೂರ ಪಟ್ಟಣದ ಜನಪ್ರತಿನಿಧಿಗಳ ಗಮನಕ್ಕೂ ಈ ಸಮಸ್ಯೆ ಬರಲಿಲ್ಲವೇ? ತಾಲೂಕಾಡಳಿತ ಮತ್ತು ಪುರಸಭೆ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಮಸ್ಯೆ ಬಗೆಹರಿಸಲು ಈಗಾಗಲೇ ಎರಡು ಬಾರಿ ಜೆಸಿಬಿಯೊಂದಿಗೆ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಆದರೆ, ರೈತರು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಾಮಗಾರಿಗೆ ತಡೆಯೊಡ್ಡಿದ್ದರಿಂದ ಸಮಸ್ಯೆ ಬಗೆಹರಿದಿಲ್ಲ. ಈ ಕುರಿತು ಪಿಡಬ್ಲ್ಯುಡಿ ಗಮನಕ್ಕೆ ತರಲಾಗಿದೆ. ಅವರು ಜಿಎಂಜೆ ಸ್ಕೂಲ್ ಹತ್ತಿರ ರಸ್ತೆಗೆ ಅಡ್ಡಚರಂಡಿ ನಿರ್ವಿುಸಿ ನೀರಿನ ಪ್ರಮಾಣ ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಮತ್ತೊಮ್ಮೆ ರೈತರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.

    | ಮಲ್ಲಿಕಾರ್ಜುನಯ್ಯ ಹಿರೇಮಠ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts