More

    VIDEO| ಮೈಸೂರು ಮೂಲದ ವೈದ್ಯೆಯ ಸೇವೆಗೆ ಅಮೆರಿಕನ್ನರ ಸಲಾಂ: ಮನೆಯ ಮುಂದಿನ ರಸ್ತೆಯಲ್ಲಿ ಕಾರುಗಳು ಪರೇಡ್​!

    ನವದೆಹಲಿ: ವೈದ್ಯೋ ನಾರಾಯಣೋ ಹರಿ ಎಂಬ ಮಾತಿನಂತೆ ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ಹೆಮ್ಮಾರಿಯನ್ನು ತೊಡೆದುಹಾಕಲು ವೈದ್ಯರು ಸಾವನ್ನು ಲೆಕ್ಕಿಸದೇ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ ಅನೇಕರು ತಮ್ಮದೇ ಶೈಲಿಯಲ್ಲಿ ಕರೊನಾ ವಾರಿಯರ್ಸ್​ಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

    ನಮ್ಮ ರಾಷ್ಟ್ರದಲ್ಲಿ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಬೆಂಬಲ ಸೂಚಿಸಿ ಪ್ರಧಾನಿ ಮೋದಿ ಅವರ ಕರೆಯಂತೆ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಮೆಚ್ಚುಗೆ ಸೂಚಿಸಿದ್ದೆವು. ಇದನ್ನು ಅನೇಕ ರಾಷ್ಟ್ರಗಳು ಸಹ ಅನುಕರಣೆ ಮಾಡಿದ್ದವು.

    ಇದೀಗ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಮೈಸೂರು ಮೂಲದ ವೈದ್ಯೆ ಡಾ. ಉಮಾ ಮಧುಸೂದನ್ ಅವರ ನಿಸ್ವಾರ್ಥ ಸೇವೆಗೆ ಅವರಿಂದ ಗುಣಮುಖರಾದ ಅನೇಕರು ಗೌರವ ಸೂಚಿಸಿದ್ದಾರೆ.

    ಮಧು ಅವರು ಸೌಥ್​ ವಿಂಡ್ಸರ್ ನಿವಾಸಿಯಾಗಿದ್ದು, ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ರೋಗಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಅವರ ಚೇತರಿಕೆಗೆ ಕಾರಣರಾಗಿದ್ದಕ್ಕೆ ಮಧು ಅವರ ಮನೆಯ ಮುಂದಿನ ರಸ್ತೆಯಲ್ಲಿ ಸಾಲು ಸಾಲು ಕಾರುಗಳ ಮೂಲಕ ಚಲಿಸುತ್ತಾ, ಗೌರವ ಸೂಚಕ ಭಿತ್ತಿಫಲಕಗಳನ್ನು ಪ್ರದರ್ಶಿಸಿ ಸೆಲ್ಯೂಟ್ ಹೊಡೆದಿದ್ದಾರೆ. ಈ ವೇಳೆ ಮಧು ಅವರು ಕೂಡ ಮನೆಯ ಮುಂದೆ ನಿಂತು ಕೈಬೀಸುತ್ತಾ ಧನ್ಯವಾದ ತಿಳಿಸಿದರು.

    ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್​ ಅವರು ಟ್ವೀಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ ರವರಿಂದ ಗುಣಮುಖರಾದವರು, ಅಲ್ಲಿನ ಸರ್ಕಾರಿ ಸಂಸ್ಥೆಗಳು ಕೃತಜ್ಞತೆ, ಗೌರವ ತೋರಿದ ರೀತಿ ನೋಡಿ ತುಂಬಾ ಸಂತೋಷವಾಯಿತು. ಡಾ.ಉಮಾರವರ ಸೇವೆಗಳಿಗೆ ಧನ್ಯವಾದಗಳು ಎಂದು ಪ್ಲೇಕಾರ್ಡ್ ಪ್ರದರ್ಶಿಸುತ್ತಾ ಸಾಲು ಸಾಲು ವಾಹನಗಳು ಮುಂದೆ ಸಾಗಿದವು. ನಿಜಕ್ಕೂ ಸಾರ್ಥಕತೆಯನ್ನು ಕಂಡಂತಾಯಿತು ಎಂದಿದ್ದಾರೆ.

    ಅಮೆರಿಕದ ರಾಷ್ಟ್ರೀಯ ವಿಜ್ಞಾನ ಮಂಡಳಿಗೆ ಭಾರತೀಯನ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts