More

    ಬಿಎಸ್​ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ; ಡಾ.ಸುಧಾಕರ್​ ಹೆಗಲಿಗೆ ಆರೋಗ್ಯ ಖಾತೆ

    ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇಬ್ಬರು ಸಚಿವರ ಖಾತೆಗಳು ಬದಲಾಗಲಿವೆ.

    ಬಿ.ಶ್ರೀರಾಮುಲು ಕೈಯಲ್ಲಿರುವ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ಗೆ ನೀಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ.

    ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಕೆಲ ಸಂವಹನ ಕೊರತೆ ಇದೆ ಎಂಬ ದೂರು ಕೇಳಿಬರುತ್ತಿತ್ತು. ಅಲ್ಲದೆ ಕರೊನಾ ತಡೆಗೆ ಒಬ್ಬರ ಬಳಿಯೇ ಈ ಎರಡೂ ಖಾತೆ ಇದ್ದರೆ ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಮತ್ತೊಂದೆಡೆ ಸುಧಾಕರ್ ಕೂಡ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯನ್ನು ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯ ಮಾಡಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಖಾತೆ ಬದಲಾವಣೆ ನಿರ್ಧಾರ ಕೈಗೊಂಡಿದ್ದಾರೆ.

    ಇನ್ನು ಮೊದಲಿಂದಲೂ ಆರೋಗ್ಯ ಇಲಾಖೆ ಬೇಡ, ಸಮಾಜ ಕಲ್ಯಾಣ ಇಲಾಖೆ ಕೊಡಿ ಎಂದು ಸಿಎಂ ಬಳಿ ಬಿ.ಶ್ರೀರಾಮುಲು ಮನವಿ ಮಾಡುತ್ತಿದ್ದರು. ಇದೀಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜತೆಗೆ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲುಗೆ ಕೊಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

    ಗೋವಿಂದ ಕಾರಜೋಳ ಅವರ ಬಳಿ ಇರುವ ಸಮಾಜ ಕಲ್ಯಾಣ ಖಾತೆಯು ಇನ್ಮುಂದೆ ಶ್ರೀರಾಮುಲು ಹೆಗಲಿಗೆ ಬೀಳಲಿದೆ.

    ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

    ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

    ‘ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಶತಮಾನದ ಮಹಾ ಸುಳ್ಳುಗಾರ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts