More

    ನಿರ್ಗತಿಕರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ

    ಸೊರಬ: ನಿರ್ಗತಿಕರು, ಅಸಹಾಯಕರು ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
    ಸೋಮವಾರ ತಾಲೂಕಿನ ಉಳವಿಯಲ್ಲಿ ಉಳವಿ ಮುಸ್ಲಿಂ ಸಮಾಜದಿಂದ ರಂಜಾನ್ ಉಪವಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಜಾನ್ ಇಫ್ತಿಯಾರ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು.
    ದಯ ಇಲ್ಲದ ಧರ್ಮ ಯಾವುದೂ ಇಲ್ಲ. ಮನುಷ್ಯತ್ವವನ್ನು ಇಟ್ಟುಕೊಂಡು ಬದುಕಬೇಕಿದ್ದು ಧರ್ಮದ ಬೋಧನೆಗಳನ್ನು ಸರಿಯಾದ ರೀತಿ ಅರ್ಥ ಮಾಡಿಕೊಂಡು ನಡೆಯಬೇಕು. ಎಲ್ಲ ಧರ್ಮಗಳು ತನ್ನದೇ ಆದ ಶ್ರೇಷ್ಠತೆ ಒಳಗೊಂಡಿದೆ. ಎಲ್ಲರೂ ಒಗ್ಗೂಡಿ ಸೌಹಾರ್ದತೆಯಿಂದ ನಡೆದಾಗ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
    ಇಳಕಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಉಪವಾಸದಿಂದ ಆತ್ಮ ಸಂಸ್ಕಾರಗೊಳ್ಳುತ್ತದೆ. ಉಪವಾಸವಿದ್ದು ಸುಳ್ಳು ಹೇಳಬಾರದು. ಕೆಡಕುಗಳನ್ನು ಮಾಡಬಾರದು ಎಂದು ಪ್ರವಾದಿಗಳು ಹೇಳಿದ್ದಾರೆ. ಒಬ್ಬರನ್ನು ಸಂಶಯದಿಂದ ನೋಡುವುದಾಗಲಿ, ಅವರ ಬಗ್ಗೆ ಕೀಳರಿಮೆಯಿಂದ ಮಾತನಾಡಿದಲ್ಲಿ ಅದು ಸಮಾಜವನ್ನು ಸಂಕುಚಿತಗೊಳಿಸುತ್ತದೆ. ಇರುವ ಸ್ಥಿತಿಯಲ್ಲಿಯೇ ಯಾರು ಸಂತೃಪ್ತಗೊಳ್ಳುವರು ಅವರು ಶ್ರೇಷ್ಠರಾಗುತ್ತಾರೆ ಎಂದರು. ಸೌಹಾರ್ದ ಕೂಟದಲ್ಲಿ ಸಿಗಂಧೂರು ಧರ್ಮದರ್ಶಿ ಡಾ. ಶ್ರೀ ಎಸ್. ರಾಮಪ್ಪ, ಹೊಸನಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೆ. ಶ್ರೀಪತಿ ಹಳಗುಂದ, ದೂಗೂರು ಗ್ರಾಪಂ ಅಧ್ಯಕ್ಷ ಫಯಾಜ್ ಅಹ್ಮದ್, ಉಳವಿ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸೊರಬ ಜಾಮಿಯಾ ಮಸೀದಿಯ ಅಧ್ಯಕ್ಷ ಸೈಯದ್ ಅಬ್ದುಲ್ ರೆಹೆಮಾನ್ ಸಾಬ್, ತಾಲೂಕು ಈಡಿಗ ಸಂಘದ ಅಧ್ಯಕ್ಷ ಎಚ್. ಗಣಪತಿ, ಉಳವಿ ಮುಸ್ಲಿಂ ಕಮಿಟಿ ಅಧ್ಯಕ್ಷ ಜಿಯಾವುಲ್ಲಾ, ಅಬ್ದುಲ್ ಮುಜೀಬ್, ಹನೀಫ್ ಸಾಬ್, ವಾಜೀದ್ ಸಾಬ್, ಗುಲ್ಜಾರ್ ಅಹ್ಮದ್, ಹುಸೇನ್ ಸಾಬ್, ಅಬು ಸ್ವಾಲೇಹ, ಸುಜಾಯಿತ್-ಉಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts