More

    ಸವಲತ್ತು ಪಡೆಯಲು ಸಂಘಟನೆ ಪೂರಕ

    ಸೊರಬ: ಸಂಘಟನೆಯಲ್ಲಿ ಬಲವಿದ್ದು ಸಂಘಟನೆ ಮೂಲಕ ಕಾರ್ವಿುಕರು ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಡೆ ಸಂಸ್ಥಾನಮಠ ಹಾಗೂ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

    ತಾಲೂಕಿನ ಜಡೆಯಲ್ಲಿ ರಾಜ್ಯ ಕನ್ಸ್​ಟ್ರಕ್ಷನ್ಸ್ ವರ್ಕರ್ಸ್ ಯೂನಿಯನ್ ಶಾಖೆ ಉದ್ಘಾಟಿಸಿ ಹಾಗೂ ಕಟ್ಟಡ ಕಾರ್ವಿುಕರ ಗುರುತಿನ ಚೀಟಿ ಮತ್ತು ಲಕ್ಷ್ಮೀ ಬಾಂಡ್ ವಿತರಿಸಿ ಮಾತನಾಡಿ, ಅಸಾಧ್ಯವಾದುದ್ದನ್ನು ಸಾಧಿಸುವ ಶಕ್ತಿ ಸಂಘಟನೆಗಿದೆ. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಕಾರ್ವಿುಕರ ಹಕ್ಕು ಎಂದು ತಿಳಿಸಿದರು.

    ಯೂನಿಯನ್ ರಾಜ್ಯ ಕಾರ್ಯದರ್ಶಿ ಡಿ.ಧನಶೇಖರ್ ಮಾತನಾಡಿ, ದೇಶದಲ್ಲಿ ಅಸಂಘಟಿತ ಕೃಷಿ ಮತ್ತು ಕಟ್ಟಡ ಕಾರ್ವಿುಕರ ಸಂಖ್ಯೆ ದೊಡ್ಡದು. ದೇಶದ ಒಟ್ಟು ಆದಾಯದಲ್ಲಿ ಅಸಂಘಟಿತ ಕಾರ್ವಿುಕಾರ ಪಾಲು ಶೇ.65 ಇದೆ. ಆದರೆ ಆ ಕಾರ್ವಿುಕರಿಗೆ ಉತ್ತಮ ವೇತನವಿಲ್ಲ. ಸರ್ಕಾರದ ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಕಾರ್ವಿುಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದರು.

    ಎಲ್ಲ ಕಾರ್ವಿುಕರು ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು. ಕರೊನಾ ಸಂದರ್ಭದಲ್ಲಿ ರಾಜ್ಯ ಸಂಘ ಅಸಂಘಟಿತ ಕಾರ್ವಿುಕರ ನೆರವಿಗೆ ಬರುವಂತೆ ಸರ್ಕಾರಕ್ಕೆ ಒತ್ತಾಯಿದ ಮೇರೆಗೆ ಕಾರ್ವಿುಕರಿಗೆ 5 ಸಾವಿರ ರೂ. ಪರಿಹಾರ ನೀಡಿದೆ. ಪ್ರತಿಯೊಬ್ಬರೂ ಸಂಘದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು.

    ತಾಲೂಕು ಅಧ್ಯಕ್ಷ ಪ್ರಕಾಶ ಹುಣಸವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ರಾಜುಗೌಡ ತುಮರಿಕೊಪ್ಪ, ರಸೂಲ್ ಅಹಮ್ಮದ್, ಸುಬ್ರಮಣಿ, ಸಂಜಯಕುಮಾರ್, ಕೆ.ಸುಂದರಬಾಲು, ಡಿ.ಮಣಿ, ಜ್ಯೋತಿ, ನಾಗರಾಜ್, ನಾರಾಯಣಸ್ವಾಮಿ, ಸಿದ್ದಪ್ಪ, ರುದ್ರೇಗೌಡ, ಅಮಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts