More

    ಮನೆಯಲ್ಲಿ ಮೊದಲ ಪೂಜೆ ಸಲ್ಲುವುದು ವರನಟನಿಗೆ ; ಚನ್ನಪಟ್ಟಣದ ತಗಚಗೆರೆಯಲ್ಲಿ ಇದ್ದಾನೆ ಅಪ್ಪಟ ರಾಜ್ ಅಭಿಮಾನಿ

    ಚನ್ನಪಟ್ಟಣ: ಮನೆಗಳ ದೇವರ ಕೋಣೆಯಲ್ಲಿ ತಮ್ಮಿಷ್ಟದ ದೇವರುಗಳನ್ನು ಇಟ್ಟು ಪೂಜೆ ಸಲ್ಲಿಸುವುದು ಮಾಮೂಲು. ಆದರೆ, ಅಭಿಮಾನಿಯೊಬ್ಬರ ಮನೆಯ ದೇವರ ಕೋಣೆಯಲ್ಲಿ ಮೊದಲ ಪೂಜೆ ಸಲ್ಲುವುದು ವರನಟ ಡಾ.ರಾಜಕುಮಾರ್ ಅವರಿಗೆ.

    ಹೌದು, ತಾಲೂಕಿನ ತಗಚಗೆರೆಯ ಗ್ರಾಮದಲೊಬ್ಬ ನಾಗೇಶ್‌ ಎಂಬ ಅಪ್ಪಟ ರಾಜ್ ಅಭಿಮಾನಿ ಇದ್ದಾನೆ. ನಟನೆಯ ಮೂಲಕ ಸಾವಿರಾರು ಅಭಿಮಾನಿಗಳ ಬಾಳಲ್ಲಿ ಬದಲಾವಣೆ ತಂದ ಅಭಿಮಾನಿಗಳ ಆರಾಧ್ಯ ದೈವ, ವರನಟ ಡಾ.ರಾಜಕುಮಾರ್ ಅವರ 93ನೇ ಜನ್ಮದಿನಾಚರಣೆಯನ್ನು ಕರುನಾಡಿನ ಅಸಂಖ್ಯಾತ ಅಭಿವಾನಿಗಳು ಹಲವು ಸಾರ್ಥಕ ಕಾರ್ಯಗಳ ಮೂಲಕ ಆಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ವರ್ಷದಲ್ಲಿ ಒಂದು ದಿನ ವರನಟನ ಹುಟ್ಟುಹಬ್ಬದ ನೆನಪಿನಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಅಸಂಖ್ಯಾತ ಅಭಿಮಾನಿಗಳ ನಡುವೆ ತನ್ನ ಮನೆಯ ದೇವರಕೋಣೆಯಲ್ಲಿ ತನ್ನ ಆರಾಧ್ಯದೈವ ಡಾ.ರಾಜ್‌ಕುಮಾರ್ ಭಾವಚಿತ್ರವಿಟ್ಟು ವರ್ಷಪೂರ್ತಿ ಪೂಜೆ ಸಲ್ಲಿಸುವ ನಾಗೇಶ್‌ ಅಪರೂಪದ ಅಭಿಮಾನಿಯಾಗಿ ಕಾಣುತ್ತಾರೆ.

    ಈತನ ಅಭಿಮಾನ ಪೂಜೆಗೆ ಸೀಮಿತವಾಗದೆ, ರಾಜ್ ಅಭಿನಯಿಸಿರುವ ಸಂಪೂರ್ಣ ಚಿತ್ರಗಳ ಸಿಡಿಗಳನ್ನು ಈ ಅಭಿಮಾನಿ ಕಲೆಹಾಕಿದ್ದಾನೆ. ತನ್ನ ಮನೆಯಲ್ಲಷ್ಟೇ ಅಲ್ಲದೆ ಮೊಬೈಲ್, ಬೈಕ್‌ಗಳ ಮೇಲೂ ಅಣ್ಣಾವ್ರ ಭಾವಚಿತ್ರ ರಾರಾಜಿಸುತ್ತಿವೆ. ಪ್ರತಿನಿತ್ಯ ತನ್ನ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸುವ ಮೂಲಕ ದಿನ ಆಚರಿಸುವ ನಾಗೇಶ್, ಪ್ರತಿ ತಿಂಗಳು ಹಾಗೂ ನೆನಪಾದ ಕೂಡಲೇ ತನ್ನೆಲ್ಲ ಕೆಲಸ ಕಾರ್ಯ ಬದಿಗೊತ್ತಿ ಬೆಂಗಳೂರಿಗೆ ತೆರಳಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಶಾಶ್ವತವಾಗಿರಿಸಿದ್ದಾನೆ. ಕೇವಲ ಸಿನಿಮಾ ಸಿಡಿಯಷ್ಟೇ ಅಲ್ಲದೇ ರಾಜಕುಮಾರ್ ಅವರ ಅಪರೂಪದ ಭಾವಚಿತ್ರ ಮತ್ತು ಅವರ ಕುರಿತು ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ, ಲೇಖನಗಳನ್ನೂ ಸಂಗ್ರಹಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ.

    ಬೆನ್ನತಟ್ಟಿದ ದೊಡ್ಮನೆ ಕುಟುಂಬ: ಈತನದೊಂದಿಗೆ ಇವರ ತಾಯಿ ಜಯಮ್ಮ ಕೂಡ ರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಮಗನ ಅಭಿಮಾನ ಹೆಚ್ಚಳವಾಗಲು ಕಾರಣವಾಗಿದ್ದಾರೆ. ಡಾ.ರಾಜ್ ಬದುಕಿದ್ದಾಗ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲಿಲ್ಲ ಎಂಬ ಕೊರಗು ನಾಗೇಶ್ ಅವರನ್ನು ಕಾಡುತ್ತಿದೆ. ಈತನ ಅಭಿಮಾನದ ಸುದ್ದಿ ತಿಳಿದ ಡಾ.ರಾಜ್ ಕುಮಾರ್ ಕುಟುಂಬ ನಾಗೇಶನನ್ನು ಮನೆಗೆ ಕರೆಸಿಕೊಂಡು ದೊಡ್ಡಮನೆಯ ಸದಸ್ಯರು ಎಂದು ಬೆನ್ನು ತಟ್ಟಿರುವುದು ಈತನ ಸಮಾಧಾನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts