More

    ರವಿಶಂಕರ್ ಗೌಡ ಮೈ ಮೇಲೆ ಅಣ್ಣಾವ್ರು ಬಂದಾಗ ..!!

    ಬೆಂಗಳೂರು: ಕರೊನಾದಿಂದ ಇಡೀ ದೇಶ ಸ್ತಬ್ಧವಾಗಿದೆ. ಎಲ್ಲರೂ ಸ್ಟೇ ಹೋಮ್ ಮೂಡ್‌ನಲ್ಲಿದ್ದಾರೆ. ಬಗೆಬಗೆ ಕಲಿಕೆ, ಅಡುಗೆ, ಓದು, ಕೈ ತೋಟ, ಯೋಗ ಇನ್ನೂ ಏನೆನೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ನಟ, ಗಾಯಕ ರವಿಶಂಕರ್ ಗೌಡ ಹೊಸ ರೀತಿಯ ಸಾಹಸಕ್ಕೆ ಕೈ ಹಾಕಿದ್ದಾರೆ. ಮೈ ಮೇಲೆ ಡಾ. ರಾಜ್‌ಕುಮಾರ ಅವರನ್ನು ಆವಾಹಿಸಿಕೊಂಡಿದ್ದಾರೆ! ಹೌದು, ಅಚ್ಚರಿ ಅನಿಸಿದರೂ ಇದು ಸತ್ಯ. ಅದಕ್ಕೆ ಸಾಕ್ಷ್ಯವಾಗಿ ವಿಡಿಯೋ ಸಹ ಲಭ್ಯವಾಗಿದೆ.
    ಮನೆಯಲ್ಲಿ ಕ್ವಾರಂಟೈನ್ ಕಾಲಗಳನ್ನು ಕಳೆಯುತ್ತಿರುವ ನಟ ರವಿಶಂಕರ್, ತನುವು ಮನವು ಎಂದು ನಿಂದಾಗಿದೆ ಎನ್ನುತ್ತಿದ್ದಾರೆ. ಮೈಕ್ ಹಿಡಿದು, ಅಣ್ಣಾವ್ರ ರಾಜ ನನ್ನ ರಾಜ ಚಿತ್ರದ ಹಾಡನ್ನು ಗುನುಗುತ್ತಿದ್ದಾರೆ. ಆ ಹಾಡಿನ ತಾಳಕ್ಕೆ ರವಿಶಂಕರ್ ಪತ್ನಿ ಸಂಗೀತಾ ಗುರುರಾಜ್ ಸಹ ಸಾಥ್ ನೀಡಿದ್ದಾರೆ. ಆ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ಅಣ್ಣಾವ್ರ ನನ್ನ ಮೈ ಮೇಲೆ ಬಂದ್ ಬಿಟ್ರೆ, ನನ್ನನ್ನ ನಾನೇ ತಡೆಯೋದು ಕಷ್ಟ ಎಂಬ ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ.
    ಅಂದಹಾಗೆ, ಕಿರುತೆರೆಯಲ್ಲಿ ಸಿಲ್ಲಿಲಲ್ಲಿ ಧಾರಾವಾಹಿಯ ಮೂಲಕ ಡಾ. ವಿಠ್ಠಲ್‌ರಾವ್ ಆಗಿ ನಗಿಸಿದ್ದ ರವಿಶಂಕರ್, ಗಾಯನದಲ್ಲೂ ಎತ್ತಿದ ಕೈ. ಹಲವು ವರ್ಷಗಳ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಗಾಯನದ ಮೂಲಕವೇ ಗಮನ ಸೆಳೆದಿದ್ದರು. ಇಂದಿಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈಗ ಕರೊನಾ ಹಿನ್ನೆಲೆಯಲ್ಲಿ ಪತ್ನಿ ಜತೆಗೆ ಕುಳಿತು ಎವರ್‌ಗ್ರೀನ್ ಹಾಡಿಗೆ ಧ್ವನಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts