More

    ಡಾ.ಪ್ರಭಾಕರ ಕೋರೆ ಸೊಸೈಟಿ ರಾಣೆಬೆನ್ನೂರ ಶಾಖೆಗೆ ಬೆಸ್ಟ್ ಬ್ರಾೃಂಚ್ ಪ್ರಶಸ್ತಿ

    ರಾಣೆಬೆನ್ನೂರ: ರಾಜ್ಯದಲ್ಲಿನ ಡಾ. ಪ್ರಭಾಕರ ಕೋರೆ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 49 ಶಾಖೆಗಳ ಪೈಕಿ ನಗರದ ಶಾಖೆಯು 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬೆಸ್ಟ್ ಬ್ರಾೃಂಚ್ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸೊಸೈಟಿಯ ಸ್ಥಳೀಯ ಶಾಖೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ ತಿಳಿಸಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಖೆಯು ಕಳೆದ 6 ವರ್ಷಗಳಲ್ಲಿ ತೋರಿದ ಸಾಧನೆ, ಸಾಲ ನೀಡಿಕೆ ಮತ್ತು ಶೇ. 100ರಷ್ಟು ಸಾಲ ವಸೂಲಾತಿ, ಗ್ರಾಹಕರ ಜತೆ ಸಿಬ್ಬಂದಿಯ ವರ್ತನೆ ಮುಂತಾದ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ಲಭಿಸಿದೆ ಎಂದರು.
    ಸೊಸೈಟಿಯಲ್ಲಿ ಚಕ್ರಬಡ್ಡಿಯಿಲ್ಲದೇ ಶೇ. 11ರ ಬಡ್ಡಿದರಲ್ಲಿ ಚಿನ್ನದ ಸಾಲ ನೀಡಲಾಗುತ್ತಿದ್ದು, ಸಾಲ ಮರುಪಾವತಿಗೆ ಐದು ವರ್ಷಗಳ ಕಾಲಾವಶವಿದೆ. ಅವಧಿ ಮುಗಿದ ಮೇಲೆ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ. ಇದರಿಂದ ರೈತರಿಗೆ ಸಾಲ ಮರುಪಾವತಿಸಲು ಸಾಕಷ್ಟು ಅನುಕೂಲವಾಗುತ್ತದೆ. ಸೊಸೈಟಿಯ ಪ್ರತಿಯೊಬ್ಬ ಶೇರುದಾರರಿಗೂ ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಒಂದು ವೇಳೆ ಶೇರುದಾರರು ಮೃತಪಟ್ಟಲ್ಲಿ ಅವರ ಕುಟುಂಬದ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ದೊರಕುತ್ತದೆ.
    ಸದ್ಯ ಸೊಸೈಟಿಯಲ್ಲಿ 3500 ಶೇರುದಾರರಿದ್ದು 3.50 ಲಕ್ಷ ರೂ. ಶೇರು ಬಂಡವಾಳ ಹಾಗೂ 16 ಕೋಟಿ ಠೇವಣಿ ಹೊಂದಿದೆ. ಶೇರುದಾರರಿಗೆ 4.50 ಕೋಟಿ ರೂ. ಸಾಲ ನೀಡಲಾಗಿದ್ದು 16.89 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.
    ಸೊಸೈಟಿಯ ನಿರ್ದೇಶಕರಾದ ಗದಿಗೆಪ್ಪ ಹೊಟ್ಟಿಗೌಡ್ರ, ಉಮೇಶ ಹೊನ್ನಾಳಿ, ವೀರಣ್ಣ ಅಂಗಡಿ, ಉಮೇಶ ಗುಂಡಗಟ್ಟಿ, ವ್ಯವಸ್ಥಾಪಕರಾದ ಮನೋಹರ ಬಡಿಗೇರ, ದೀಪಕ ಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts