More

    ಡಾ.ಪ್ರಭಾಕರ ಕೋರೆಗೆ ಅಮೇ ರಿಕಾ ಥಾಮಸ್ ವಿವಿ ಗೌರವ ಡಾಕ್ಟರೇಟ್

    ಬೆಳಗಾವಿ: ಶಿಕ್ಷಣ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆಗಳ ಸಾಧನೆಗಾಗಿ ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆ್ಯಂಡ್ ರಿಸರ್ಚ್‌ನ ಕುಲಾಧಿಪತಿ ಡಾ.ಪ್ರಭಾಕರ ಕೋರೆಗೆ ಅಮೇರಿಕಾದ ಪ್ರತಿಷ್ಠಿತ ಥಾಮಸ್ ಚಿಫರಸನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ ಎಂದು ಜೆಎನ್‌ಎಂಸಿ ವಿವಿ ಕುಲಪತಿ ಡಾ.ವಿವೇಕ ಸಾವೋಜಿ ತಿಳಿಸಿದರು.

    ನಗರದ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾಡ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಭಾಗದಲ್ಲಿ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಸಂಶೋಧನೆಗಳ ಮೂಲಕ ಸಮಾಜದ ಉನ್ನತೀಕರಣಕ್ಕಾಗಿ ಸಲ್ಲಿಸಿದ ಅನುಪಮ ಸೇವೆಗಳನ್ನು ಗುರುತಿಸಿ ಡಾ.ಪ್ರಭಾಕರ ಕೋರೆ ಅವರಿಗೆ ಈ ಪ್ರತಿಷ್ಠಿತ ಗೌರವ ದೊರೆಯುತಿರುವುದು ಕೆಎಲ್‌ಇ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

    2020 ಮೇ 20ರಂದು ನಡೆಯುವ ಅಮೇರಿಕೆಯ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಲಿದ್ದಾರೆ. ಅದೇ ಸಮಾರಂಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆ್ಯಂಡ್ ರಿಸರ್ಚ್ ಮತ್ತು ಥಾಮಸ್ ಜೆಫರಸನ್ ವಿವಿ ನಡುವೆ ಶೈಕ್ಷಣಿಕ ಹಾಗೂ ಸಂಶೋಧನೆ ಸಹಯೋಗಗಳನ್ನು ನಿರ್ವಹಿಸಲು ಥಾಮಸ್ ವಿವಿಯಲ್ಲಿ ಇಂಡಿಯಾ ಸೆಂಟರ ಫಾರ್ ಸ್ಟಡಿಸ್‌ಗೆ ಚಾಲನೆ ದೊರೆಯಲಿದೆ. ಇದಕ್ಕಾಗಿ ಸಂಯುಕ್ತ ಅಮೇರಿಕಾದ ಭಾರತೀಯ ರಾಯಭಾರಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

    ಡಾ.ಶಿವಪ್ರಸಾದ ಎಸ್.ಗೌಡರ ಮಾತನಾಡಿ, ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆ್ಯಂಡ್ ರಿಸರ್ಚ್ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಖ್ಯಾತ ವಿವಿ ಹಾಗೂ ಸಂಸ್ಥೆಗಳೊಂದಿಗೆ ಹಲವಾರು ಸಹಯೋಗಗಳನ್ನು ಸ್ಥಾಪಿಸಿದೆ. ಅಮೇರಿಕಾದ ಫಿಲಾಡೆಲ್ಫಿಯಾದ ಥಾಮಸ್ ಜೆಫಸರನ್ ವಿವಿದೊಂದಿಗೆ ದೀರ್ಘಕಾಲದಿಂದ ತಾಯಿ ಮತ್ತು ವನಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.

    ಇಲ್ಲಿ ಯಶಸ್ವಿಯಾಗಿರುವ ಔಷಧಗಳನ್ನು ವಿಶ್ವ ಸಂಸ್ಥೆಯು ಅಮೆರಿಕೆಯ ಸೇರಿದಂತೆ 54 ರಾಷ್ಟಗಳನ್ನು ಅಳವಡಿಸಿಕೊಂಡಿದೆ. ಭಾರತ ಸರ್ಕಾರವು ಈ ಸಂಶೋಧನೆಗೆ ಮಾನ್ಯತೆ ನೀಡಿದೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ಮನ್ನಣೆ ಪಡೆದುಕೊಂಡಿವೆ. ಆರೋಗ್ಯ ಕ್ಷೇತ್ರದಲ್ಲಿ ನೀತಿ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡು ಬರುತ್ತಿವೆ ಎಂದರು.

    ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದೊಂದಿಗೆ ತಾಯಿ ಮತ್ತು ನವಜಾತ ಶಿಶು ಆರೋಗ್ಯ ಸಂಶೋಧನೆಗಳ ಸಹಯೋಗದ ಹೊರತಾಗಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ ಆ್ಯಂಡ್ ರಿಸರ್ಚ್ ಈ ಸಹಯೋಗದೊಂದಿಗೆ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಮೂತ್ರಶಾಸ್ತ್ರ, ನರವಿಜ್ಞಾನ, ವಿಕಿರಣಶಾಸ್ತ್ರ, ಮನೋವೈದ್ಯಶಾಸ್ತ್ರ, ಸಾರ್ವಜನಿಕ ಆರೋಗ್ಯ, ಭೌತಿಕಚಿಕಿತ್ಸೆ, ಶುಶ್ರೂಷಾ ವಿಜ್ಞಾನ, ಸಮಗ್ರ ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ಮುಂದುವರಿಸಿದೆ ಎಂದರು.

    ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನಿರ್ದೇಶಕ ಡಾ.ಆರ್.ಬಿ. ನೇರಲಿ, ಕೆಎಲ್‌ಇ ಬಿ.ಎಂ.ಕಂಕಣವಾಡಿ ಆರ್ಯುವೇದಿಕೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಬಿ.ಶ್ರೀನಿವಾಸ ಪ್ರಸಾದ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts