More

    ಧಾರವಾಡಕ್ಕೆ ಡಾ. ಎಂ.ಎಂ. ಕಲಬುರ್ಗಿ ಟ್ರಸ್ಟ್ ಕೊಡುಗೆ

    ಧಾರವಾಡ: ಕಾಂಗ್ರೆಸ್ ಸರ್ಕಾರ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆಗಳು ಲಭ್ಯವಾಗಿಲ್ಲ. ಕಳಸಾ- ಬಂಡೂರಿ ಕಾಮಗಾರಿಗೆ ಚಾಲನೆ, ಡಾ. ಎಂ.ಎಂ. ಕಲಬುರ್ಗಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಹಾಗೂ ಹುಬ್ಬಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ ಜಿಲ್ಲೆಗೆ ದೊರೆತ ಕೊಡುಗೆಗಳು.
    ಖ್ಯಾತ ಸಂಶೋಧಕ, ಹಿರಿಯ ಸಾಹಿತಿಯಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಯನ್ನು ಸರ್ಕಾರ ಘೋಷಿಸಿದೆ. ಸರ್ಕಾರದ ಕ್ರಮವನ್ನು ಸಾಹಿತ್ಯ ವಲಯ ಸ್ವಾಗತಿಸಿದೆ. ಆದರೆ. ಡಾ. ಕಲಬುರ್ಗಿ ಅವರ ಹೆಸರಲ್ಲಿ ಈ ಹಿಂದೆ ೨೦೧೬ರಲ್ಲಿ ಸರ್ಕಾರ ಘೋಷಿಸಿದ್ದ ಡಾ. ಕಲಬುರ್ಗಿ ಸಂಶೋಧನಾ ಪೀಠ ಇನ್ನೂ ಆರಂಭವೇ ಆಗಿಲ್ಲ. ಕಲಬುರ್ಗಿ ಸಂಶೋಧನಾ ಪೀಠವನ್ನು ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ೨ ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಆದರೆ, ಈ ಬಗ್ಗೆ ಜವಾಬ್ದಾರಿ ಮರೆತ ಪರಿಣಾಮ ಪೀಠ ಸ್ಥಾಪನೆ ನನೆಗುದಿಗೆ ಬಿದ್ದಿದೆ.
    ಇದೀಗ ಸರ್ಕಾರ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿ ಡಾ. ಕಲಬುರ್ಗಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಘೋಷಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಡಾ. ದ.ರಾ. ಬೇಂದ್ರೆ ರಾಷ್ಟಿçÃಯ ಸ್ಮಾಕರ ಟ್ರಸ್ಟ್, ಡಾ. ಮಲ್ಲಿಕಾರ್ಜುನ ಮನಸೂರ ಟ್ರಸ್ಟ್, ಪಂ. ಬಸವರಾಜ ರಾಜಗುರು, ಡಿ.ವಿ. ಹಾಲಭಾವಿ ಹಾಗೂ ಆಲೂರು ವೆಂಕಟರಾವ್ ಟ್ರಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಸಾಹಿತ್ಯಿಕ ತವರೂರಾಗಿರುವ ಧಾರವಾಡದಲ್ಲಿ ಡಾ. ಕಲಬುರ್ಗಿ ಟ್ರಸ್ಟ್ ಸ್ಥಾಪನೆಯಾಗುವುದು ವಿದ್ಯಾಕಾಶಿಯ ಮುಕುಟಕ್ಕೆ ಮತ್ತೊಂದು ಗರಿಯಾಗಲಿದೆ.
    ಡಾ. ಕಲಬುರ್ಗಿ ಟ್ರಸ್ಟ್ ಘೋಷಣೆಯಾದ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಽಕಾರಿಗಳು ಡಾ. ಕಲಬುರ್ಗಿ ಅವರ ಮನೆಗೆ ತೆರಳಿ ಉಮಾದೇವಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಿಂದೆ ಘೋಷಣೆಯಾಗಿದ್ದ ಸಂಶೋಧನಾ ಪೀಠದಂತೆ ಟ್ರಸ್ಟ್ ಸ್ಥಾಪನೆ ಕೇವಲ ಕಾಗದದಲ್ಲಿ ಉಳಿಯಬಾರದು ಎನ್ನುತ್ತಾರೆ ಡಾ. ಕಲಬುರ್ಗಿ ಅಭಿಮಾನಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts