More

  ಪುರಾಣ ಪ್ರವಚನಗಳಿಂದ ದೊರೆಯಲಿದೆ ನೆಮ್ಮದಿ; ಡಾ.ಕೊಟ್ಟೂರು ಸ್ವಾಮೀಜಿ

  ಗಂಗಾವತಿ: ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆ ಸಮಾಜಕ್ಕೆ ಪೂರಕವಾಗಿದ್ದು, ಸಮೃದ್ಧ ನಾಡನ್ನು ಕಟ್ಟಲು ಸಾಧ್ಯ ಎಂದು ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.

  ನಗರದ ಕಲ್ಮಠ ಪುರಾಣ ಮಂಟಪದಲ್ಲಿ ಶ್ರೀಕೊಟ್ಟೂರೇಶ್ವರ ಮಹಾಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಮತ್ತು ಶರಣ ಸಂಸ್ಕೃತಿ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದರು.

  ಶಾಂತಿ ಮತ್ತು ನೆಮ್ಮದಿ ದೊರೆಯಬೇಕಾದರೆ ಪುರಾಣ ಪ್ರವಚನಗಳನ್ನು ಆಲಿಸಬೇಕು. ಶರಣರ ಮತ್ತು ದಾರ್ಶನಿಕರ ಜೀವನಗಾಥೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು, ಧರ್ಮ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ನಿರಂತರವಾಗಿರಲು ಭಕ್ತರ ನೆರವು ಮುಖ್ಯ ಎಂದರು.

  ಹಿರೇನಾಗಾವಿ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅನ್ನ, ಅಕ್ಷರ ಮತ್ತು ಆಶ್ರಯ ಒದಗಿಸುತ್ತಿರುವ ಮಠಗಳಿಂದ ಧರ್ಮ ಮತ್ತು ಶೈಕ್ಷಣಿಕ ಸೇವೆ ಮುಂದುವರಿದಿದೆ. ಧಾರ್ಮಿಕ ಚಟುವಟಿಕೆಗಳ ಮೂಲಕವೇ ಭಗವಂತನನ್ನು ಅನುಗ್ರಹಿಸಿಕೊಳ್ಳಬೇಕಿದೆ ಎಂದರು.
  ಇದಕ್ಕೂ ಮುನ್ನ ಮಠದಲ್ಲಿ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳ ಭಾವಚಿತ್ರವನ್ನು ಶ್ರೀ ದುರ್ಗಾದೇವಿ ದೇವಾಲಯದವರೆಗೂ ನೆರವೇರಿಸಲಾಯಿತು. ಕರ್ತೃಗದ್ದುಗೆ ರುದ್ರಾಭಿಷೇಕ, ಪ್ರಸಾದ ವಿತರಣೆ, ಶ್ರೀ ಚನ್ನಬಸವಶಿವಯೋಗಿಗಳ ಪುರಾಣ ಮಹಾಮಂಗಲ ಜರುಗಿತು.

  ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತ ಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಗಡ್ಡಿ ಅಪ್ಪಾಜಿ ಆಶ್ರಮದ ಸಂಗಮೇಶ್ವರ ಸ್ವಾಮೀಜಿ, ಗುಳೇದ ಗುಡ್ಡ ಸದ್ಗುರು ಸದಾನಂದ ಶಿವಯೋಗಿಮಠದ ನಾಗಭೂಷಣ ಸ್ವಾಮೀಜಿ, ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ರೈತ ಮುಖಂಡ ದುರುಗಪ್ಪ ದಳಪತಿ, ಪುರಾಣ ಪ್ರವಚನಕಾರ ಶಿವರಾಜಶಾಸಿ ಇದ್ದರು.

  See also  ತಾಯಿ ಮಗಳಂತಿರಬೇಕು ಅತ್ತೆ-ಸೊಸೆ: ಕಂಪ್ಲಿಯ ಕಲ್ಮಠದ ಪ್ರಭು ದೇವರ ಸ್ವಾಮೀಜಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts