More

  ಡಾ.ಕೋರೆ ಜನ್ಮದಿನ ಅಂಗವಾಗಿ 27ರಿಂದ ವಿವಿಧ ಕಾರ್ಯಕ್ರಮ

  ಚಿಕ್ಕೋಡಿ: ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 76ನೇ ಜನ್ಮದಿನದ ಅಂಗವಾಗಿ ಜು.27 ರಿಂದ ಅ.1ರ ವರೆಗೆ ರೈತಪರ ಹಾಗೂ ಸಮಾಜೋಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನ್ಮದಿನ ಆಚರಣೆ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.

  ತಾಲೂಕಿನ ಅಂಕಲಿ ಶಿವಾಲಯದ ಸಭಾಭವನದಲ್ಲಿ ಡಾ.ಪ್ರಭಾಕರ ಕೋರೆ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋರೆ ಜನ್ಮದಿನದ ಅಂಗವಾಗಿ ಶಿವಾಲಯದಲ್ಲಿ ಜು.31 ರಿಂದ ಅ.1 ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

  ಜು.27 ಹಾಗೂ 28ರಂದು ಅಂಕಲಿ, ನಿಪ್ಪಾಣಿ, ಚಿಕ್ಕೋಡಿ, ಸಂಕೇಶ್ವರ, ಶಿರಗುಪ್ಪಿ, ಅಥಣಿ, ಹಾರೂಗೇರಿ, ರಾಯಬಾಗನಲ್ಲಿ ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಜು.29 ಹಾಗೂ 30 ರಂದು ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ನಿಬಂಧ, ಭಾಷಣ, ಆಶುಭಾಷಣ, ಚರ್ಚಾಕೂಟ ಸ್ಪರ್ಧೆ ಆಯೋಜಿಸಲಾಗಿದೆ. ಜು.31 ರಂದು ಅಂಕಲಿಯ ಶಿವಾಲಯದಲ್ಲಿ ಮಧ್ಯಾಹ್ನ 2ಗಂಟೆಗೆ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆಯ ಮಹತ್ವ ಕುರಿತ ಉಪನ್ಯಾಸ ಆಯೋಜಿಸಲಾಗಿದೆ. ಅ.1 ರಂದು ಅಂಕಲಿಯ ಶಿವಾಲಯದಲ್ಲಿ ಬೆಳಗ್ಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಸಲಾಗಿದೆ. ಜನ್ಮದಿನದ ಸಮಾರಂಭಕ್ಕೆ ವಿವಿಧ ಮಠಾೀಶರು, ಶಾಸಕರು ಗಣ್ಯರು ಆಗಮಿಸಲಿದ್ದಾರೆ. ಸಮಿತಿ ಮಾಜಿ ಅಧ್ಯಕ್ಷ ಭರತ ಬನವಣೆ, ಸಂದೀಪ ಪಾಟೀಲ, ಚೇತನ ಪಾಟೀಲ, ಮಹಾಂತೇಶ ಪಾಟೀಲ, ಡಿ.ಎಸ್ ಕರೋಶಿ ,ಶಿವಾನಂದ ಹಕಾರೆ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts