More

    ಏಕಪತ್ನಿವ್ರತಸ್ಥ ಸಾಬೀತಿಗೆ ಸವಾಲ್​: ಬಿಜೆಪಿ ಶಾಸಕರಿಗೆ 2 ಆಯ್ಕೆ ಕೊಟ್ಟ ಸಿದ್ದರಾಮಯ್ಯ

    ಬೆಂಗಳೂರು: ಸಚಿವ ಡಾ.ಕೆ. ಸುಧಾಕರ್​ರ ‘ಏಕಪತ್ನಿವ್ರತಸ್ಥ’ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಸಾಬೀತು ಮಾಡಲಿ ಎಂದು ನಿನ್ನೆ ಸುಧಾಕರ್​ ಹಾಕಿದ್ದ ಸವಾಲಿಗೆ ಎಲ್ಲ ಪಕ್ಷದಲ್ಲಿಯೂ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೆ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್​ ಪ್ರತಿಭಟನೆಗೂ ಸಜ್ಜಾಗಿದೆ. ಮಹಿಳಾ ಶಾಸಕಿಯರು ಸುಧಾಕರ್​ ವಿರುದ್ಧ ಗರಂ ಆಗಿದ್ದಾರೆ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೆಣೆದಿದ್ದಾರೆ. ಅದಕ್ಕಾಗಿ ಅವರಿಗೆ 2 ಆಯ್ಕೆ ಕೊಟ್ಟಿದ್ದಾರೆ.

    ಆಯ್ಕೆ1: ಡಾ.ಕೆ. ಸುಧಾಕರ್​ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ, ರಾಜ್ಯ ಸರ್ಕಾರ ತಕ್ಷಣ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮಕೈಗೊಳ್ಳಬೇಕು. 1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧ.

    ಆಯ್ಕೆ 2: ಸುಧಾಕರ್​ ಹೇಳಿಕೆಯನ್ನು ಕರ್ನಾಟಕದ ಬಿಜೆಪಿ ಶಾಸಕರು ವಿರೋಧಿಸುವುದಾದರೆ ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವಇಚ್ಛೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ನೀವು ಸಿಎಂ ಯಡಿಯೂರಪ್ಪ ಅವರಿಗೆ ತಕ್ಷಣ ಪತ್ರ ಬರೆದು ತಮ್ಮ ಬಗ್ಗೆಯೂ ತನಿಖೆ ನಡೆಸುವಂತೆ ಮನವಿ ಮಾಡಬೇಕು.

    ಹೀಗೆ ಟ್ವೀಟ್​ ಮೂಲಕ ಬಿಜೆಪಿ ಶಾಸಕರಿಗೆ ಎರಡು ಆಯ್ಕೆ ನೀಡಿರುವ ಸಿದ್ದರಾಮಯ್ಯ, ವಿವಾದಾತ್ಮಕ ಹೇಳಿಕೆ ಕೊಟ್ಟ ಸುಧಾಕರ್​ರನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಜತೆಗೆ ಎಲ್ಲರೂ ಏಕಪತ್ನಿವ್ರತಸ್ಥ ಎಂಬುದನ್ನು ಸಾಬೀತು ಮಾಡಿಕೊಳ್ಳಬೇಕು ಎಂದು ಮಾತಿನಲ್ಲೇ ಚಾಟಿಬೀಸಿದ್ದಾರೆ.

    ‘ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 222 ಶಾಸಕರ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನೂ ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ. ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 222 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದು ಸುಧಾಕರ್​ ನಿನ್ನೆ ಮಾಧ್ಯಮದ ಮುಂದೆ ಹೇಳಿದ್ದರು. ಇದು ನಿನ್ನೆ ಕಲಾಪದಲ್ಲೂ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು.

    ‘ಸದನದ ಘನತೆ ಹರಾಜು ಹಾಕುವುದು ತಪ್ಪು’ : ಸುಧಾಕರ್ ಹೇಳಿಕೆಗೆ ಶಾಸಕಿಯರ ಅಸಮಾಧಾನ

    ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

    ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts