More

    ಡಾ. ವೇಲುಮುರುಗನ್ ಎ. ಸಲಹೆ; ಮಣ್ಣು ರಹಿತ ಕೃಷಿ ಸಂಶೋಧನೆ ಕೈಗೊಳ್ಳಿ

    ಧಾರವಾಡ: ಭವಿಷ್ಯದಲ್ಲಿ ಮಣ್ಣು ರಹಿತ ಕೃಷಿ ತಾಂತ್ರಿಕತೆಗಳ ಬಗ್ಗೆ ಸಂಶೋಧನಾತ್ಮಕ ಚಿಂತನೆ ನಡೆದಿವೆ. ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಹಾಯಕ ಮಹಾನಿರ್ದೇಶಕ ಡಾ. ವೇಲುಮುರುಗನ್ ಎ. ಹೇಳಿದರು.
    ನಗರದ ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ ಹಾಗೂ ಭಾರತೀಯ ಮಣ್ಣು ವಿಜ್ಞಾನ ಸಂಸ್ಥೆ ಜಂಟಿಯಾಗಿ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಖ್ಯಾತ ಮಣ್ಣು ವಿಜ್ಞಾನಿ ಡಾ. ಎ.ಎಸ್. ಹಾದಿಮನಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಡಾ. ಹಾದಿಮನಿಯವರ ಕೊಡುಗೆಗಳನ್ನು ಸ್ಮರಿಸಿದರು. ಡಾ. ಜಿ.ಎಸ್. ದಾಸೋಗ್, ಡಾ. ಎಚ್.ಬಿ. ಬಬಲಾದ್, ಡಾ. ಮಂಜುನಾಥ ಹೆಬ್ಬಾರ, ಡಾ. ವಿ.ಬಿ. ಕುಲಿಗೋಡ, ಡಾ. ಅಕ್ಕಮಹಾದೇವಿ, ಡಾ. ಹಾದಿಮನಿಯವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts