More

    ಸತತ 35 ದಿನದಿಂದ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಯುವ ವೈದ್ಯ ಸಾವು… ಆದರೆ ಅವರು ಮೃತಪಟ್ಟಿದ್ದು ಕರೊನಾದಿಂದ ಅಲ್ಲ..; ಮನಕಲಕುವ ಘಟನೆ

    ಹುಬೈ: ಕರೊನಾ ವೈರಸ್​ ಪೀಡಿತ ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದ ಯುವ ವೈದ್ಯ ಮೃತಪಟ್ಟಿದ್ದಾರೆ. ಆದರೆ ಅವರು ಕರೊನಾದಿಂದ ಜೀವ ಬಿಟ್ಟಿಲ್ಲ.

    29 ವರ್ಷದ ಚೀನಾದ ವೈದ್ಯರು 35 ದಿನಗಳ ಕಾಲ ತಡೆರಹಿತವಾಗಿ ಕರೋನವೈರಸ್ ವಿರುದ್ಧ ಹೋರಾಡಿದ ನಂತರ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದಾರೆ. ಹುಬೈ ಪ್ರಾಂತ್ಯದ ಆಸ್ಪತ್ರೆಯೊಂದರ ಅರವಳಿಕೆ ತಜ್ಞ 29ವರ್ಷದ ಡಾ.ಡಾಂಗ್ ಟಿಯಾನ್ ಅವರು ಕಳೆದ 35 ದಿನಗಳಿಂದಲೂ ಕರೊನಾ ಸೋಂಕಿತರಿಗೆ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರು. ಡಾ. ಡಾಂಗ್​ ಅವರ 30ನೇ ವರ್ಷದ ಹುಟ್ಟುಹಬ್ಬಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿಯಿತ್ತು. ಆದರೆ ಶನಿವಾರ ಒಂದು ದುರಂತ ಸಂಭವಿಸಿತು. ಆಸ್ಪತ್ರೆಯಲ್ಲಿದ್ದ ವೈದ್ಯ ಡಾಂಗ್​ ಪಾರ್ಶ್ವವಾಯುವಿನಿಂದ ಮೃತಪಟ್ಟರು.

    ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಪ್ರಮುಖ ವೈದ್ಯರಲ್ಲಿ ಓರ್ವರಾಗಿದ್ದ ಡಾ. ಡಾಂಗ್​ ಏಕಾಏಕಿ ಕುಸಿದು ಬಿದ್ದರು. ಅವರನ್ನು ಮಾ.3ರಂದು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ 19ದಿನಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾಂಗ್​ ಶನಿವಾರ ಮೃತಪಟ್ಟಿದ್ದಾರೆ. ಇವರು ಪತ್ನಿ ಮತ್ತು ಕಾಯಿಲೆಗೀಡಾದ ತಂದೆಯನ್ನು ಅಗಲಿದ್ದಾರೆ.

    ಈ ವೈದ್ಯನ ಅಂತಿಮ ಸಂಸ್ಕಾರ ಅವರ ಸ್ವಂತ ಮನೆಯಿರುವ ಹುಬೈ ಪ್ರಾಂತ್ಯದ ಡಂಗ್ಯಾಂಗ್​​ನಲ್ಲಿ ನಡೆಯಿತು. ಈ ವೇಳೆ ಸ್ಥಳೀಯರು’ ಆ್ಯಂಟಿ ಕರೊನಾ ವೈರಸ್​ ಹೀರೋ ಡಾಂಗ್​ ಟಯಾನ್​ಗೆ ಸ್ವಾಗತ’ ಎಂಬ ಬ್ಯಾನರ್​ಗಳನ್ನು ಹಿಡಿದ ದೃಶ್ಯ ಮನಕಲಕುತ್ತಿತ್ತು.

    ನಿರಂತರವಾಗಿ ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಡಾಂಗ್​ ಫೆ.29ರಂದು ಕೆಲಸದಿಂದ ಸ್ವಲ್ಪ ಬ್ರೇಕ್​ ತೆಗೆದುಕೊಂಡಿದ್ದರು. ಅಲ್ಲದೆ, ಸ್ವತಃ ಕ್ವಾರಂಟೈನ್​ಗೆ ಒಳಪಟ್ಟಿದ್ದರು. ಈ ಪ್ರತ್ಯೇಕ ಅವಧಿಯಲ್ಲಿ ಇದ್ದ ಅವರಿಗೆ ಮಾರ್ಚ್​ 3ರಂದು ಅನಾರೋಗ್ಯ ಪ್ರಾರಂಭವಾಯಿತು. ಏಕಾಏಕಿ ಕುಸಿದು ಬಿದ್ದ ವೈದ್ಯರು, ಮಾತನಾಡಲು ಸಾಧ್ಯವಾಗದೆ ಕಷ್ಟಪಟ್ಟರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts