More

    ದೇವರಿಗೆಂದೇ ಇಲ್ಲಿ ನಡೆಯುತ್ತೆ ದೋಸೆ ಹಬ್ಬ; 800 ಕುಟುಂಬಗಳಿಂದ ಒಟ್ಟಿಗೇ ದೋಸೆ ನೈವೇದ್ಯ..

    ಹಾವೇರಿ: ಇಲ್ಲಿ ದೇವರಿಗೆಂದೇ ದೋಸೆ ಹಬ್ಬ ನಡೆಯುತ್ತದೆ. ಮಾತ್ರವಲ್ಲ, ಬರೋಬ್ಬರಿ 800 ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತವೆ. ಅರ್ಧ ಶತಮಾನಕ್ಕಿಂತಲೂ ಹಿಂದಿನಿಂದ ನಡೆದುಕೊಂಡು ಬಂದಿರುವ ಈ ಪದ್ಧತಿ ಹಾವೇರಿ ಜಿಲ್ಲೆಯ ಒಂದು ವಿಶೇಷ ಆಚರಣೆ.

    ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಈ ದೋಸೆ ಹಬ್ಬ ನಡೆಯುತ್ತದೆ. ಇಲ್ಲಿನ ಜನರು ದೋಸೆ ಬರಮಪ್ಪ ದೇವರಿಗೆ ದೋಸೆ ಮಾಡಿ ನೈವೇದ್ಯ ಅರ್ಪಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಇಂದೂ ಈ ಆಚರಣೆ ನಡೆದಿದ್ದು, ಸಂಜೆಯಿಂದ ನೂರಾರು ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡಿದ್ದಾರೆ.

    ಸಂಜೆ ಐದು ಗಂಟೆಯ ಮೇಲೆ ನಡೆಯುವ ಈ ದೋಸೆ ಹಬ್ಬದಲ್ಲಿ ಗ್ರಾಮದ 800 ಕುಟುಂಬಗಳಿಂದ ಒಟ್ಟಿಗೆ ದೋಸೆಯನ್ನು ನೈವೇದ್ಯವಾಗಿ ಒಪ್ಪಿಸಲಾಗುತ್ತದೆ. ಇಲ್ಲಿನ ಗ್ರಾಮಸ್ಥರು ಸುಮಾರು 70-80 ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ದನಕರುಗಳಿಗೆ ಆರೋಗ್ಯ ಸಮಸ್ಯೆ ಆಗಬಾರದು ಎಂದು ಇದನ್ನು ಆಚರಿಸಲಾಗುತ್ತಿದೆ. ವಿಶೇಷ ಎಂದರೆ ಈ ಊರಿನಲ್ಲಿ ಇದುವರೆಗೂ ದನಕರುಗಳಿಗೆ ರೋಗರುಜಿನ ಬಂದಿಲ್ಲವಂತೆ. ಹೀಗಾಗಿ ಈ ದೇವರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ ಭಕ್ತರು, ಇದನ್ನು ಆಚರಿಸಿಕೊಂಡು ಬಂದಿದ್ದಾರೆ.

    ಕೊಡಗಲ್ಲಿ 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ-ಜಲಸ್ಫೋಟ; 18 ಮನೆಯವರ ತೆರವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts