More

    ಏಪ್ರಿಲ್ 13ರಿಂದ 17ರ ವರೆಗೆ ಮನೆ, ಮನೆಯಲ್ಲಿ ಮತದಾನ

    ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕ ಮತದಾರರು ಹಾಗೂ ಶೇ.40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ವಿಶೇಷ ಚೇತನರಿಗೆ ಏಪ್ರಿಲ್ 13ರಿಂದ 17ರ ವರೆಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಲೇ ಸಂಗ್ರಹಿಸಿರುವ ಮಾಹಿತಿಯನ್ನು ಎಲೆಕ್ಟಾನ್ ತಂತ್ರಾಂಶದಲ್ಲಿ ದಾಖಲಿಸಿ ಸದರಿ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ.
    ವಿಧಾನಸಭಾ ಕ್ಷೇತ್ರವಾರು ಮತದಾನವನ್ನು ಮಡಿಕೇರಿಯಲ್ಲಿ(208) ಏ.15 ರಿಂದ 17 ರವರೆಗೆ , ವಿರಾಜಪೇಟೆ(209) ಏ.15 ರಿಂದ 17ರವರೆಗೆ, ಪಿರಿಯಾಪಟ್ಟಣ(210) ಏ.14 ರಿಂದ 15ರವರೆಗೆ, ಹುಣಸೂರು(212) ಏ.15 ರಿಂದ 16ರವರೆಗೆ, ಚಾಮುಂಡೇಶ್ವರಿ(215) ಏ.13 ರಿಂದ 14ರವರೆಗೆ, ಕೃಷ್ಣರಾಜ(216) ಏ.13 ರಿಂದ 14ರವರೆಗೆ, ಚಾಮರಾಜ(217) ಏ.14 ರಿಂದ 15 ಹಾಗೂ ನರಸಿಂಹರಾಜ(218)ದಲ್ಲಿ ಏ.13 ರಿಂದ 14 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts