More

    ಕರೊನಾ ಜೆಎನ್1 ಆತಂಕ ಬೇಡ; ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸಲಹೆ

    ಮೈಸೂರು: ಕೇರಳದಲ್ಲಿ ಮತ್ತೆ ಕರೊನಾ ಹೊಸ ರೂಪಾಂತರಿ ಜೆಎನ್1 ಪತ್ತೆಯಾಗಿರುವುದರಿಂದ ಜನರು ಆತಂಕಪಡುವ ಅಗತ್ಯ ಇಲ್ಲ, ಎಚ್ಚರಿಕೆಯಿಂದ ಇರಬೇಕು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದ್ದಾರೆ.
    ಕೋವಿಡ್ ಬಗ್ಗೆ ಜನರಿಗೆ ಈಗಾಗಲೇ ಮಾಹಿತಿ ಇದೆ. ಕೆಮ್ಮು, ಜ್ವರ, ನೆಗಡಿ, ತಲೆನೋವು, ಇರುವವರು ಮಾಸ್ಕ್ ಹಾಕಬೇಕು. 60 ವರ್ಷ ದಾಟಿದವರು ಸಕ್ಕರೆ ಕಾಯಿಲೆ ಇರುವವರು, ಡಯಾಲಿಸೀಸ್ ಮಾಡಿಸುತ್ತಿರುವವರು, ಹೃದಯ ಸಂಬಂಧಿ ಕಾಯಿಲೆ ಇರುವವರು, ಶ್ವಾಸಕೋಶ ಸಮಸ್ಯೆ ಇದ್ದವರು ಮಾಸ್ಕ್ ಹಾಕಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
    ಇನ್ನು 15 ದಿನದಲ್ಲಿ ಕೋವಿಡ್ ಯಾವ ಟ್ರೆಂಡ್ ಎಂದು ಗೊತ್ತಾಗುತ್ತದೆ. ಈಗಾಗಲೇ ಸಿಂಗಾಪುರ್, ಮಲೇಶಿಯಾ, ಇಂಡೋನೇಷಿಯಾಗಳಲ್ಲಿ ಸರ್ಜಾಫ್ ಕೇಸ್ ಅಂತ ಹೇಳುತ್ತಿದ್ದಾರೆ. ನಾವು ಕಾದು ನೋಡಬೇಕು. ಮೊದಲ ಸಲ ಕರೊನಾ ಬಂದಾಗ ಹೊಸ ವೈರಸ್‌ಗೆ ಚಿಕಿತ್ಸೆ ಏನು ಕೊಡಬೇಕು ಎನ್ನುವುದು ಗೊತ್ತಿರಲಿಲ್ಲ, ಈಗ ಆ ಪರಿಸ್ಥಿತಿ ಇಲ್ಲ. ಅಗತ್ಯ ಇರುವ ಆಕ್ಸಿಜನ್, ಯಾವ ಔಷಧ ನೀಡಬೇಕು ಎಂಬ ಮಾಹಿತಿ ಇದೆ. ಹೀಗಾಗಿ ಜನರು ಆತಂಕಪಡುವ ಅಗತ್ಯ ಇಲ್ಲ ಎಂದರು.
    ಡೆಲ್ಟಾ ಹೆಚ್ಚು ತೊಂದರೆ ಕೊಡುತ್ತಿತ್ತು. ಓಮಿಕ್ರಾನ್ ಹರಡುವಿಕೆ ಇತ್ತೇ ಹೊರತು ತೀವ್ರತೆ ಇರಲಿಲ್ಲ. ಕರೊನಾ ಪ್ರಕರಣಗಳು ಇನ್ನೂ ಹೆಚ್ಚಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸುತ್ತ್ತವೆ. ಅದಕ್ಕಾಗಿ ಕಾದು ನೋಡೋಣ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts