More

    ಮನೆಯಲ್ಲಿ ಕ್ರೀಡೆ ಬಗ್ಗೆ ಮಾತನಾಡಲ್ವಂತೆ ಕಾರ್ತಿಕ್-ದೀಪಿಕಾ ದಂಪತಿ!

    ಚೆನ್ನೈ: ಭಾರತದ ಅಪರೂಪದ ಕ್ರೀಡಾ ದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಲ್ಲಿಕಲ್. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕ್ರಿಕೆಟಿಗರಾಗಿ ಜನಪ್ರಿಯತೆ ಗಳಿಸಿದ್ದರೆ, ಕಾಮನ್ವೆಲ್ತ್-ಏಷ್ಯನ್ ಗೇಮ್ಸ್ ಪದಕ ವಿಜೇತೆ ದೀಪಿಕಾ ಪಲ್ಲಿಕಲ್ ಸ್ಕ್ವಾಷ್ ಆಟದಲ್ಲಿ ಸಾಧನೆ ಮಾಡಿದ್ದಾರೆ. ಇವರಿಬ್ಬರೂ ವೃತ್ತಿಪರ ಕ್ರೀಡಾಪಟುಗಳು. ಆದರೆ ಈ ಗಂಡ-ಹೆಂಡತಿ ಮನೆಯಲ್ಲಿ ತಮ್ಮ ತಮ್ಮ ಕ್ರೀಡೆಗಳ ಬಗ್ಗೆ ಮಾತನಾಡುವುದೇ ಇಲ್ಲವಂತೆ!

    ಇದನ್ನೂ ಓದಿ: ವಿದೇಶಿ ಕ್ರಿಕೆಟಿಗರಿಲ್ಲದ ಐಪಿಎಲ್‌ಗೆ ಕಿಂಗ್ಸ್ ಇಲೆವೆನ್‌ನಿಂದಲೂ ವಿರೋಧ

    ಕರೊನಾ ಹಾವಳಿ ಇರದಿದ್ದರೆ ದಿನೇಶ್ ಕಾರ್ತಿಕ್ ಕಳೆದ 2 ತಿಂಗಳಿನಿಂದ ಐಪಿಎಲ್ 13ನೇ ಆವೃತ್ತಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ನಾಯಕರಾಗಿ ಬಿಜಿಯಾಗಿರಬೇಕಾಗಿತ್ತು. ಇನ್ನು ದೀಪಿಕಾ ಪಲ್ಲಿಕಲ್ ಸ್ಕ್ವಾಷ್ ಟೂರ್ನಿಗಳಿಗಾಗಿ ಪ್ರವಾಸದಲ್ಲಿರಬೇಕಾಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಇವರಿಬ್ಬರೂ ಕಳೆದ ಎರಡೂವರೆ ತಿಂಗಳಿನಿಂದ ಮನೆಯಲ್ಲೇ ಬಂಧಿಯಾಗಿದ್ದು, ಜತೆಯಾಗಿ ಹೆಚ್ಚಿನ ಸಮಯ ಕಳೆಯುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ದೀಪಿಕಾಗೆ ಮನೆಗೆಲಸದಲ್ಲಿ ಕಾರ್ತಿಕ್ ನೆರವನ್ನೂ ಒದಗಿಸುತ್ತಿದ್ದಾರಂತೆ.

    ಇದನ್ನೂ ಓದಿ: VIDEO: 50 ಪ್ರಯತ್ನಗಳ ಬಳಿಕ ಕ್ಲಿಕ್ ಆದ ವಾರ್ನರ್ ದಂಪತಿ ಡ್ಯಾನ್ಸ್

    ‘ನಮ್ಮಂಥ ಕ್ರೀಡಾಪಟುಗಳಿಗೆ ಕುಟುಂಬದ ಜತೆಗೆ ಸಮಯ ಕಳೆಯುವ ಅವಕಾಶ ಬಹಳ ಕಡಿಮೆ ಸಿಗುತ್ತದೆ. ಆದರೆ ಲಾಕ್‌ಡೌನ್‌ನಿಂದಾಗಿ ನಮ್ಮಿಬ್ಬರಿಗೆ ಜತೆಯಾಗಿ ಕಳೆಯಲು ಸಾಕಷ್ಟು ಸಮಯ ಲಭಿಸಿದೆ. ನಾವು ಈಗ ಎಲ್ಲ ಸಮಯವನ್ನು ಜತೆಯಾಗಿಯೇ ಕಳೆಯುತ್ತಿದ್ದೇವೆ. ಮನೆಗೆಲಸದಲ್ಲೇ ಹೆಚ್ಚಿನ ಸಮಯವನ್ನೂ ವ್ಯಯಿಸುತ್ತಿದ್ದೇವೆ’ ಎಂದು 28 ವರ್ಷದ ದೀಪಿಕಾ ಪಲ್ಲಿಕಲ್ ಹೇಳಿದ್ದಾರೆ.

    ಮನೆಯಲ್ಲಿ ಕ್ರೀಡೆ ಬಗ್ಗೆ ಮಾತನಾಡಲ್ವಂತೆ ಕಾರ್ತಿಕ್-ದೀಪಿಕಾ ದಂಪತಿ!

    ‘ಕ್ರೀಡಾಪಟುಗಳ ಅಗತ್ಯವೇನೆಂದು ನಾನು ಮತ್ತು ದಿನೇಶ್ ಇಬ್ಬರೂ ಅರ್ಥಮಾಡಿಕೊಂಡಿದ್ದೇವೆ. ಆದರೆ ಮನೆಯಲ್ಲಿರುವಾಗ ನಾವಿಬ್ಬರೂ ಇತರ ವಿಚಾರಗಳ ಬಗ್ಗೆ ಮಾತನಾಡಲು ಹೆಚ್ಚು ಆದ್ಯತೆ ನೀಡುತ್ತೇವೆ. ಕ್ರಿಕೆಟ್ ಅಥವಾ ಸ್ಕ್ವಾಷ್ ಬಗ್ಗೆ ಯಾವುದೇ ಮಾತುಕತೆ ನಡೆಸುವುದಿಲ್ಲ’ ಎಂದು ದೀಪಿಕಾ ತಿಳಿಸಿದ್ದಾರೆ.

    ಇದನ್ನೂ ಓದಿ: ಬಲಗೈ ಕ್ರಿಕೆಟಿಗ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ಹೇಗೆ ಗೊತ್ತೇ?

    ಕರೊನಾ ನಂತರದ ದಿನಗಳಲ್ಲಿ ಕ್ರೀಡೆ ಮತ್ತು ಫಿಟ್ನೆಸ್‌ನಿಂದಲೇ ಜನರಿಗೆ ಸಕಾರಾತ್ಮಕತೆ ಮತ್ತು ಸಂತಸ ಸಿಗಲಿದೆ ಎಂದು ಅಭಿಪ್ರಾಯಪಟ್ಟಿರುವ ದೀಪಿಕಾ, ಕ್ರೀಡಾಪಟುವೇ ಗಂಡನಾಗಿ ಲಭಿಸಿರುವುದು ತಮ್ಮ ಕ್ರೀಡಾ ಜೀವನದ ತ್ಯಾಗ, ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂದಿದ್ದಾರೆ. ದೀಪಿಕಾ-ಕಾರ್ತಿಕ್ 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts