More

    ಕಿಡ್ನಿ ಸಮಸ್ಯೆ ನಿರ್ಲಕ್ಷಿಸದಿರಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಿಡ್ನಿ ಸಮಸ್ಯೆಗೆ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಕಿಡ್ನಿ ವೈಫಲ್ಯವನ್ನು ತಡೆಯಬಹುದು. ಕಿಡ್ನಿ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ವಸುಧಾ ಡಯಾಲಿಸಿಸ್ ಸೆಂಟರ್ ಮುಖ್ಯಸ್ಥ ಹಾಗೂ ಮೂತ್ರಪಿಂಡ ತಜ್ಞ ಡಾ. ಶಿದ್ರಾಮ ಕಮತೆ ಹೇಳಿದರು.

    ದೇಶಪಾಂಡೆನಗರದ ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನ ಹಾಗೂ ವಸುಧಾ ಡಯಾಲಿಸಿಸ್ ಸೆಂಟರ್​ನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕಿಡ್ನಿಯಲ್ಲಿ ಸಮಸ್ಯೆ ಕಂಡು ಬಂದ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ವೈದ್ಯರ ಸಲಹೆಯನ್ನು ಪಾಲಿಸಬೇಕು ಎಂದರು. ಕಿಡ್ನಿ ರೋಗದ ಲಕ್ಷಣಗಳು, ರೋಗ ತಡೆಯುವ ವಿಧಾನ ಹಾಗೂ ಕಿಡ್ನಿ ವೈಫಲ್ಯಕ್ಕೆ ಕೊಡುವ ಚಿಕಿತ್ಸೆ ಕುರಿತು ಅವರು ವಿವರಿಸಿದರು.

    ವಿವೇಕಾನಂದ ಜನರಲ್ ಆಸ್ಪತ್ರೆಯ ಅಧ್ಯಕ್ಷ ದೀಪಕ ಶಾಹ ಅಧ್ಯಕ್ಷತೆ ವಹಿಸಿದ್ದರು. ಡಾ. ಜಿ.ಬಿ. ಸತ್ತೂರ ಅವರು ಕಿಡ್ನಿ ಸಮಸ್ಯೆ ಬಗ್ಗೆ ವಿವರಿಸಿದರು. ಡಾ. ಜಯಶಂಕರ ಹಾಗೂ ಡಾ. ಸಂತೋಷ ವಸ್ತ್ರದ, ಆಸ್ಪತ್ರೆಯ ವೈದ್ಯರು ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts