More

    ಕ್ಯಾನ್ಸರ್ ಬಗ್ಗೆ ತಪ್ಪು ತಿಳುವಳಿಕೆ ಬೇಡ

    ಬಣಕಲ್: ಕ್ಯಾನ್ಸರ್ ಬಗ್ಗೆ ತಪ್ಪು ತಿಳುವಳಿಕೆ ಬೇಡ.ಮದ್ಯಣ, ಕೆಟ್ಟ ಆಹಾರ ಪದ್ದತಿ ಮತ್ತು ಕ್ಯಾನ್ಸರ್ ಬಗ್ಗೆ ಇರುವ ತಪ್ಪು ತಿಳುವಳಿಕೆ ರೋಗ ಹೆಚ್ಚಾಗಲು ಕಾರಣ ಎಂದು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷ ಅಕಾರಿ ಶಾಂತ ಹೇಳಿದರು.
    ಕಪುಚಿನ್ ಕಷಿಕ ಸೇವಾ ಕೇಂದ್ರ, ವಿಮುಕ್ತಿ ಬಣಕಲ್ ಸಂಸ್ಥೆ ವತಿಯಿಂದ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
    ಅಸಹಜ ಗೆಡ್ಡೆ, ಬಾವು ಗೆಡ್ಡೆ, ತೂಕ ಇಳಿತ, ಹಸಿವು ಇಂಗಿತ, ರಕ್ತಸ್ರಾವ, ನೋವು ಹಾಗೂ ಅಲ್ಸರ್, ನಮ್ಮ ದೇಹದಲ್ಲಿ ಎಲ್ಲಿಯಾದರೂ ಗಂಟುಗಳು ಕಂಡುಬಂದರೆ, ಅದು ಮೂರರಿಂದ ನಾಲ್ಕು ವಾರಗಳು ಹಾಗೆ ಇದ್ದರೆ ಅದು ಕ್ಯಾನ್ಸರ್‌ಗೆ ಸಂಬಂಧ ಪಟ್ಟ ಗಂಟು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಪ್ರಮುಖವಾಗಿ ಎದೆಯ ಭಾಗದಲ್ಲಿ, ಕೈಗಳ ಕಂಕುಳಿನ ಭಾಗದಲ್ಲಿ, ಕುತ್ತಿಗೆಯ ಸಮೀಪ, ಇಲ್ಲವಾದಲ್ಲಿ ತಲೆಯಲ್ಲಿ ಈ ರೀತಿಯ ಗಂಟುಗಳು ಕಂಡುಬಂದರೆ ಅದು ಕ್ಯಾನ್ಸರ್‌ಗೆ ಸಂಬಂಧಪಟ್ಟ ಗಂಟುಗಳು ಆಗಿರಬಹುದು ಎಂದರು.
    ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಾ.ಎಡ್ವಿನ್ ಡಿಸೋಜಾ, ಸಂಯೋಜಕರಾದ ಪುತ್ತೂರಿನ ಸಿದ್ದಾಂತ್, ಬಣಕಲ್ ಗ್ರಾ.ಪಂ ಅಧ್ಯಕ್ಷೆ ಆತಿಕಾಭಾನು, ಕಾರ್ಯಕರ್ತೆ ವಿಂದ್ಯಾ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts