More

    ಅಂಗವಿಕಲ ಮಕ್ಕಳ ಬಗ್ಗೆ ಕೀಳರಿಮೆ ಬೇಡ

    ಗುಳೇದಗುಡ್ಡ: ಅಂಗವಿಕಲ ಮಕ್ಕಳ ಬಗ್ಗೆ ಕೀಳರಿಮೆ ಬೇಡ. ಇತರ ಸಾಮಾನ್ಯ ಮಕ್ಕಳಂತೆ ಕಾಳಜಿ ವಹಿಸಿ ಸಮನ್ವಯಗೊಳಿಸಿ ಬೋಧಿಸಿದರೆ ಅವರೂ ಸಾಧನೆ ಮಾಡಬಲ್ಲರು ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಉಪಪ್ರಾಚಾರ್ಯ ಎಂ.ಪಿ. ಮಾಗಿ ಹೇಳಿದರು.

    ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಅಂಗವಿಕಲ ಮಕ್ಕಳ ಕ್ರೀಡೆ ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಶಿಕ್ಷಣ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಪಾಲಕರು ಮತ್ತು ಶಿಕ್ಷಕರು ಇಂತಹ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು.
    ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ವಿ.ಎಸ್. ಮಡಿವಾಳರ, ಸಮೂಹ ಸಂಪನ್ಮೂಲ ವ್ಯಕ್ತಿ ಜಗದೀಶ ಬುಳ್ಳಾ, ಮಂಜುನಾಥ ಉಂಕಿ, ಅಂಗವಿಕಲ ಮಕ್ಕಳು, ಪಾಲಕರು, ಶಿಕ್ಷಕರು ಇದ್ದರು.

    ಅಂಗವಿಕಲ ಮಕ್ಕಳು ಒಂದು ದಿನ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿ ವಿಭೂತಿ ತಯಾರಿಕೆ, ಗೋಶಾಲೆ ವೀಕ್ಷಣೆ, ಸದಾಶಿವ ಶ್ರೀಗಳ ಲಿಂಗೈಕ್ಯ ಮಂಟಪ ವೀಕ್ಷಣೆ ಮಾಡಿದರು.

    ನಂತರ ಅಂಗವಿಕಲ ಮಕ್ಕಳಿಗೆ ಚಮಚದಲ್ಲಿ ಲಿಂಬೆ ಹಣ್ಣು ಇಟ್ಟು ಓಡುವ ಸ್ಪರ್ಧೆ, ಕೆರೆದಡ, ಕಪ್ಪೆ ಓಟ, ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts