More

    2021ರ ಬಜೆಟ್​ವರೆಗೆ ಕೇಂದ್ರದಿಂದ ಹೆಚ್ಚಿನ ಜನಪ್ರಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುವಂತಿಲ್ಲ

    ನವದೆಹಲಿ: ಇಡಿ ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಪಿಡುಗು ಮುಂದಿನ ಸಾಲಿನ ಕೇಂದ್ರ ಬಜೆಟ್​ ಮೇಲೂ ತನ್ನ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ಆದರೂ, 2021ರ ಮಾರ್ಚ್​ 31ರವರೆಗೆ ಬೇರಾವುದೇ ಜನಪ್ರಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸಬೇಡಿ ಎಂದು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದೇಶದ ಜನತೆಗೆ ಮಾಹಿತಿ ನೀಡಿದ್ದಾರೆ.

    ಕೋವಿಡ್​-19 ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಈಗಾಗಲೆ 20 ಲಕ್ಷ ಕೋಟಿ ರೂ. ಆರ್ಥಿಕ ಪುನಶ್ಚೇತನ ಕಾರ್ಯಕ್ರಮವನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ, ಆತ್ಮನಿರ್ಭರ ಭಾರತ ಅಭಿಯಾನ ಯೋಜನೆ ಹಾಗೂ ಮತ್ತಿತರ ವಿಶೇಷ ಕಲ್ಯಾಣ ಯೋಜನೆಗಳಲ್ಲಿ ಈಗಾಗಲೆ ಘೋಷಿಸಲಾಗಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಇನ್ನೊಂದು ವರ್ಷ ಬೇರಾವುದೇ ಜನಪ್ರಿಯ ಕಾರ್ಯಕ್ರಮಗಳ ಘೋಷಣೆಯನ್ನು ನಿರೀಕ್ಷಿಸಬೇಡಿ ಎಂದು ಸ್ಪಷ್ಟಪಡಿಸಿದರು.

    ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದ ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.3.1 ದಾಖಲಾಗಿದೆ. ಈ ಅವಧಿಯಲ್ಲಿ ಬೆಳವಣಿಗೆಯ ವೇಗ ತುಂಬಾ ಕುಂಠಿತವಾಗಿತ್ತು. ಕೋವಿಡ್​-19 ಲಾಕ್​ಡೌನ್​ನಿಂದಾಗಿ ಪ್ರಗತಿಯ ವೇಗ ಮತ್ತಷ್ಟು ಕುಂಠಿತವಾಗುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ 2021ರ ಮಾರ್ಚ್​ವರೆಗೆ ಅಥವಾ ಮುಂದಿನ ಆದೇಶದವರೆಗೆ ಹೆಚ್ಚಿನ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts