ನಾನು ಬಹಳ ಚಿಕ್ಕವನು … ವಿಷ್ಣುವರ್ಧನ್ ಜತೆಗೆ ಹೋಲಿಕೆ ಮಾಡಬೇಡಿ ಎಂದ ಕಿಚ್ಚ

‘ಕಿಚ್ಚ’ ಸುದೀಪ್ ಅವರಿಗೆ ಡಾ. ವಿಷ್ಣುವರ್ಧನ್ ಅವರ ಜತೆಗೆ ಅತ್ಯುತ್ತಮ ಒಡನಾಟವಿತ್ತು. ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರದಲ್ಲಿ ಅವರೊಟ್ಟಿಗೆ ಅಭಿನಯಿಸುವುದರ ಜತೆಗೆ, ‘ನಂ. 73 ಶಾಂತಿ ನಿವಾಸ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ದೇಶಿಸಿದ್ದರು ಸುದೀಪ್. ಬರೀ ಸಿನಿಮಾಗಳಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ವಿಷ್ಣುವರ್ಧನ್ ಅವರ ಜತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದ ಸುದೀಪ್ ಅವರನ್ನು ವಿಷ್ಣುವರ್ಧನ್ ಜತೆಗೆ ಹಲವು ಸಲ ಹೋಲಿಕೆ ಮಾಡಲಾಗಿದೆ. ಆದರೆ, ಅವರ ಜತೆಗೆ ಹೋಲಿಕೆ ಬೇಡ ಎಂದು ಸುದೀಪ್ ಈ ಹಿಂದೆಯೇ ಹೇಳಿಕೊಂಡಿದ್ದರು. ಈಗ ಆ ಮಾತುಗಳನ್ನು ಅವರು ಪುನರುಚ್ಛರಿಸಿದ್ದಾರೆ.

ಅದಕ್ಕೆ ಕಾರಣವಾಗಿದ್ದು ‘ಕೋಟಿಗೊಬ್ಬ 3’ ಚಿತ್ರ. ಈ ಚಿತ್ರದ ಲಿರಿಕಲ್ ವೀಡಿಯೋ ಸೋಮವಾರ ಬಿಡುಗಡೆಯಾಗಿ, ಅಪಾರ ಜನಪ್ರಿಯತೆ ಪಡೆದಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಲ್ ಪ್ರಾರಂಭವಾಗಿತ್ತು. ‘ಕೋಟಿಗೊಬ್ಬ 3’ ಸೀರೀಸ್‌ನ ಯಾವ ಟೈಟಲ್ ಸಾಂಗ್ ನಿಮಗೆ ಹೆಚ್ಚು ಇಷ್ಟ ಎಂದು ಕೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ವಿಷ್ಣುವರ್ಧನ್ ಜತೆಗೆ ಹೋಲಿಕೆ ಮಾಡಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಟ್ವೀಟ್ ಮಾಡಿರುವ ಅವರು, ‘‘ಕೋಟಿಗೊಬ್ಬ’ ಶುರುವಾಗಿದ್ದು ವಿಷ್ಣು ಸಾರ್ ಅವರಿಂದ. ಅವರ ಜಾಗ ತುಂಬುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹಿರಿಯರನ್ನೊಳಗೊಂಡ ಈ ತರಹದ ಪೋಲ್‌ಗಳನ್ನು ದಯವಿಟ್ಟು ಮಾಡಬೇಡಿ. ಏಕೆಂದರೆ, ಅವರೆಲ್ಲಾ ನಮ್ಮ ಚಿತ್ರರಂಗದ ಆಧಾರಸ್ತಂಭಗಳಿದ್ದಂತೆ. ಅವರಿಗೆ ಹೋಲಿಸಿದರೆ ನಾನು ಮತ್ತು ನನ್ನ ಚಿತ್ರಗಳು ಬಹಳ ಚಿಕ್ಕವು’ ಎಂದು ಸುದೀಪ್ ಹೇಳಿದ್ದಾರೆ.

ನೆನಪು ನಂದನ ಭಾವ ಚಿರಂತನ; ಮಾಸ್ಟರ್ ಹಿರಣ್ಣಯ್ಯ ಅಗಲಿ ಇಂದಿಗೆ ಒಂದು ವರ್ಷ

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ