More

    ‘ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎನ್ನಬೇಡಿ..’; ಮಾಧ್ಯಮದವರಿಗೆ ಬಾಲಚಂದ್ರ ಜಾರಕಿಹೊಳಿ ಮನವಿ

    ಬೆಂಗಳೂರು: ‘ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ..’
    – ಇದು ಮಾಜಿ ಸಚಿವರೊಬ್ಬರ ಸೆಕ್ಸ್ ಸಿಡಿ ಪ್ರಕರಣದಲ್ಲಿ ಕಂಡುಬಂದಿರುವ ಯುವತಿಯ ಕುರಿತಾಗಿ ಶಾಸಕ ಹಾಗೂ ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರಲ್ಲಿ ಮಾಡಿಕೊಂಡ ಮನವಿ. ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ಬೆಂಗಳೂರಿನ ಗೆಸ್ಟ್​ ಹೌಸ್​ವೊಂದರಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡುತ್ತಿರುವ ಅವರು ಈ ಮನವಿ ಮಾಡಿಕೊಂಡಿದ್ದಾರೆ. ಸೆಕ್ಸ್​ ಸಿಡಿ ಪ್ರಕರಣ ಸಂಬಂಧ ನೀಡಿದ್ದ ದೂರನ್ನು ದಿನೇಶ್​ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ. ಹೀಗಾಗಿ ಆಕೆಯನ್ನು ಸಂತ್ರಸ್ತೆ ಎಂದು ಹೇಳಬೇಡಿ ಎಂಬುದಾಗಿ ಬಾಲಚಂದ್ರ ಜಾರಕಿಹೊಳಿ ಕೋರಿಕೊಂಡರು.

    ತಮ್ಮ ಸಹೋದರನ ಮಂತ್ರಿಗಿರಿ ತೆಗೆಯಬೇಕು ಎಂಬುದೇ ಆ ಸಿಡಿ ಉದ್ದೇಶ. ಅದರ ಬಗ್ಗೆ ಸಿಬಿಐ ತನಿಖೆ ಆಗಬೇಕು. ನಮಗೆ ತಿಳಿದಿರುವ ಮೂಲಗಳ ಪ್ರಕಾರ ಅದಕ್ಕಾಗಿ ಆಕೆಗೆ 50 ಲಕ್ಷ ರೂ. ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಜೊತೆಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ. ರಷ್ಯಾದಿಂದ ಆ ವಿಡಿಯೋ ಅಪ್​ಲೋಡ್ ಮಾಡಿಸಿದ್ದಾರೆ. ಅದಕ್ಕಾಗಿ 17 ಸರ್ವರ್​ ಬುಕ್ ಮಾಡಿದ್ದಾರೆ, 15 ಕೋಟಿ ರೂ. ಖರ್ಚು ಮಾಡಿದ್ದಾರೆ. ನಾಳೆ ಸದನದಲ್ಲಿ ಹಾಜರಾದ ಬಳಿಕ ಮುಂದಿನ ದಿನಗಳಲ್ಲಿ ಈ ಎಲ್ಲದರ ವಿರುದ್ಧ ಹೋರಾಟ ನಡೆಸಲಿರುವುದಾಗಿ ಅವರು ಹೇಳಿದರು.

    ಅದು ಹನಿಟ್ರ್ಯಾಪ್​, ಮೂರ್ನಾಲ್ಕು ಜನ ಅದರ ಹಿಂದಿದ್ದು, ಬೆಂಗಳೂರಿನಿಂದ ಬೆಳಗಾವಿವರೆಗೂ ಅದರ ನಂಟು ಇದೆ. ಆ ವಿಡಿಯೋ ಮೂಲಕ ದಿನೇಶ್ ಕಲ್ಲಹಳ್ಳಿ ಮಿಸ್​ಗೈಡ್​ ಮಾಡಿದ್ದಾರೆ. ಆ ಮೂಲಕ ಅಧಿಕಾರದಿಂದ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನೇಶ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ಇನ್ನಷ್ಟೇ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಹೋದ ಮಾನ ತನಿಖೆಯಿಂದ ಮಾತ್ರ ವಾಪಸ್ ಬರುತ್ತದೆ. ಸಿಡಿ ಅಸಲಿ ಅಥವಾ ನಕಲಿ ಎಂಬುದನ್ನು ನಾವು ಹೇಳಲು ಆಗುವುದಿಲ್ಲ. ಅದಕ್ಕಾಗಿ ಅದನ್ನು ಲ್ಯಾಬ್​ಗೆ ಕಳಿಸಬೇಕು. ಮುಂದಿನ ಹೋರಾಟದ ಕುರಿತು ಕಾನೂನು ಪರಿಣತರ ಜತೆ ಚರ್ಚಿಸಿ ಮುಂದುವರಿಯುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಹಿಳೆಯರಿಗೇ ಮೀಸಲಾದ ಡಿಜಿಟಲ್ ವೇದಿಕೆ : ‘ಹರ್​ಸರ್ಕಲ್’

    VIDEO: ಕಂಕುಳಲ್ಲಿ ಕಂದನ ಹಿಡಿದು ಟ್ರಾಫಿಕ್ ಕಂಟ್ರೋಲ್​​- ಮಹಿಳಾ ದಿನದ ಮುನ್ನ ಕಂಡ ಅಪೂರ್ವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts