More

    ಏಡ್ಸ್ ಬಗ್ಗೆ ಅಜಾಗರೂಕತೆ ವಹಿಸಬೇಡಿ

    ರಾಯಚೂರು: ಎಚ್‌ಐವಿ ಏಡ್ಸ್ ಸೋಂಕು ರೋಗವಾಗಿದ್ದು, ವ್ಯಕ್ತಿಗತ ಕ್ರಿಯೆಯಲ್ಲಿ ವಹಿಸುವ ಅಜಾಗರೂಕತೆಯಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದ್ದು, ಈ ಬಗ್ಗೆ ಜಾಗರೂಕತೆ ವಹಿಸುವುದು ಪ್ರಮುಖವಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಕಾರಿ ಡಾ.ಎಂ.ಡಿ.ಶಾಕೀರ್ ಹೇಳಿದರು.
    ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್‌ಎಸ್‌ಎಸ್ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಎಚ್‌ಐವಿ ಏಡ್ಸ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಏಡ್ಸ್ ಸೋಂಕಿನ ಹರಡುವಿಕೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸುವುದರಿಂದ ಅದರ ಪಸರಿಸುವಿಕೆ ತಡೆಯಬಹುದಾಗಿದೆ ಎಂದರು.
    ಯುವ ಸಮುದಾಯ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಏಡ್ಸ್ ಕುರಿತ ಸಮಗ್ರ ಮಾಹಿತಿ ಹಾಘೂ ನಿಯಂತ್ರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಏಡ್ಸ್ ಕುರಿತು ಜನರಲ್ಲಿರುವ ಭಯ, ಮಾಹಿತಿ ಹಂಚಿಕೊಳ್ಳಲು ಸಂಕೋಚವನ್ನು ಬಿಟ್ಟು ತಪಾಸಣೆ ಮುಂದೆ ಬರುವಂತೆ ಮಾಡಬೇಕು ಎಂದು ಹೇಳಿದರು.
    ಕಾಲೇಜು ಪ್ರಾಚಾರ್ಯೆ ಡಾ.ಪುಷ್ಪಾ ಮಾತನಾಡಿ, ಕಾಲೇಜು ತನ್ನ ಸಾಮಾಜಿಕ ಸೇವೆ ಮತ್ತು ಹೊಣೆಗಾರಿಕೆಯನ್ನು ಅರಿತುಕೊಂಡು ಜಾಥಾ ಹಮ್ಮಿಕೊಂಡಿದ್ದು, ವಿದ್ಯಾರ್ಥಿನಿಯರು ಜಾಥಾದ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಶ್ರಮ ವಹಿಸಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಕಾರಿ ಡಾ.ಸಂತೋಷಕುಮಾರ ರೇವೂರ, ಪ್ರಾಧ್ಯಾಪಕರಾದ ಮಲ್ಲಯ್ಯ ಮಠಪತಿ, ಡಾ.ಸುಗುಣಾ, ವೆಂಕಟೇಶ ರಾಥೋಡ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts