More

    ಮೆಗ್ಗಾನ್ ಇಎನ್‌ಟಿ ವಿಭಾಗಕ್ಕೆ ಅತ್ಯಾಧುನಿಕ ಯಂತ್ರಗಳ ಕೊಡುಗೆ

    ಶಿವಮೊಗ್ಗ: ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು) ಕ್ಷೇತ್ರದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಟೆಂಪೊರಲ್ ಬೋನ್ ಡಿಸೆಕ್ಷನ್ ಯುನಿಟ್ ಮತ್ತು ಎಫ್‌ಇಎಸ್‌ಎಸ್ ಕ್ಯಾಡವೆರಿಕ್ ಡೆಸೆಕ್ಷನ್ ಯುನಿಟ್‌ಗಳನ್ನು ಮೆಗ್ಗಾನ್ ಆಸ್ಪತ್ರೆಯ ಇಎನ್‌ಟಿ ವಿಭಾಗದಲ್ಲಿ ಶಾಶ್ವತವಾಗಿ ತೆರೆಯಲಾಗಿದೆ ಎಂದು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್.ಗಂಗಾಧರ್ ತಿಳಿಸಿದರು.

    ಮಲ್ನಾಡ್ ಎಒಐ(ಅಸೋಸಿಯೇಷನ್ ಆಫ್ ಇಂಡಿಯಾ) ಶಾಖೆಯು 15 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಿ ಸಿಮ್ಸ್(ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ಯ ಇಎನ್‌ಟಿ ವಿಭಾಗಕ್ಕೆ ಕೊಡುಗೆಯಾಗಿ ನೀಡಿದೆ. ಇದು ಕಿವಿ ಮತ್ತು ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಅಭ್ಯಸಿಸಲು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    2015ರಲ್ಲಿ ಪ್ರಾರಂಭವಾದ ಮಲ್ನಾಡ್ ಎಒಐ ಶಾಖೆ ಲೈವ್ ಸರ್ಜರಿ ವರ್ಕ್‌ಶಾಪ್, ಸಿಎಂಇಗಳು ಸೇರಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 2016ರಲ್ಲಿ ರಾಜ್ಯಮಟ್ಟದ ಇಎನ್‌ಟಿ ತಜ್ಞರ ಸಮಾವೇಶದಲ್ಲಿ 600ಕ್ಕೂ ಅಧಿಕ ತಜ್ಞರು ಪಾಲ್ಗೊಂಡಿದ್ದರು. ಇದೀಗ ಈ ಉಪಕರಣಗಳು ಇಎನ್‌ಟಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಕಿರಿಯ ಇಎನ್‌ಟಿ ತಜ್ಞರಿಗೆ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಪಡೆಯಲು ಉಪಯೋಗವಾಗುತ್ತದೆ ಎಂದರು.
    ಇದುವರೆಗೆ ಲೈವ್ ಸರ್ಜರಿ ಮಾತ್ರಗಳು ನಡೆಯುತ್ತಿದ್ದವು. ಇದೀಗ ಟೆಂಪೊರಲ್ ಬೋನ್ ಡಿಸೆಕ್ಷನ್ ಯುನಿಟ್ ಮತ್ತು ಎಫ್‌ಇಎಸ್‌ಎಸ್ ಕ್ಯಾಡವೆರಿಕ್ ಡೆಸೆಕ್ಷನ್ ಯುನಿಟ್‌ನಿಂದ ಹ್ಯಾಂಡ್ ಆಫ್ ಟ್ರೈನಿಂಗ್ ಕೂಡ ನಡೆಸಬಹುದಾಗಿದೆ ಎಂದ ಅವರು, ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುಟ್ಟಿನಿಂದಲೇ ಕಿವುಡುತನ ಇರುವ ಮಕ್ಕಳಿಗೆ ಅಳವಡಿಸುವ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು ಇದುವರೆಗೆ 6 ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದರು.
    ಸಿಮ್ಸ್ ನಿರ್ದೇಶಕ ಡಾ. ವಿ.ವಿರೂಪಾಕ್ಷಪ್ಪ ಅವರು ಮಲ್ನಾಡ್ ಎಒಐ ಶಾಖೆಯಿಂದ ಸ್ವೀಕರಿಸಲಾದ ಉಪಕರಣಗಳಿಗೆ ಚಾಲನೆ ನೀಡಿದರು. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟಿಲ್, ಮಲ್ನಾಡ್ ಎಒಐ ಕಾರ್ಯದರ್ಶಿ ಡಾ. ಲೋಹಿತ್‌ಕುಮಾರ್, ಐಎಂಎ ಜಿಲ್ಲಾಧ್ಯಕ್ಷ ಡಾ. ಅರುಣ್, ಹಿರಿಯ ಇಎನ್‌ಟಿ ತಜ್ಞ ಡಾ. ಪುರುಷೋತ್ತಮ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣಾ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts